Mon. Aug 11th, 2025

Ajith kumar car accident : ಶೂಟಿಂಗ್‌ ವೇಳೆ ಖ್ಯಾತ ತಮಿಳು ನಟ ಅಜಿತ್‌ ಕುಮಾರ್‌ ಗಂಭೀರ ಅಪಘಾತಕ್ಕೆ ಒಳಗಾಗಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿಡಿಯೋ ನೋಡಿದ ಅವರ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ.

ಹೌದು.. ʼವಿದಾಮುಯುರ್ಚಿʼ ಸಿನಿಮಾ ಶೂಟಿಂಗ್‌ ವೇಳೆ ಈ ಘಟನೆ ನಡೆದಿದೆ. ಈ ಚಿತ್ರದ ಶೂಟಿಂಗ್ ಕೆಲ ತಿಂಗಳ ಹಿಂದೆ ಅಜರ್ ಬೈಜಾನ್ ನಲ್ಲಿ ನಡೆದಿತ್ತು. ಈ ವೇಳೆ ಅಜಿತ್‌ ಅವರು ಚಾಲನೆ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಈ ಕುರಿತ ದೃಶ್ಯಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ..

ಈ ವಿಡಿಯೋವನ್ನು ನಟ ಅಜಿತ್ ಅವರ ಆಪ್ತ ಸಹಾಯಕ ಸುರೇಶ್ ಚಂದ್ರ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಅವರು ಶೇರ್‌ ಮಾಡಿರುವ ವಿಡಿಯೋದಲ್ಲಿ, ಅಪಘಾತ ಹೇಗೆ ಸಂಭವಿಸಿತು ಎಂಬುವುದನ್ನು ತಿಳಿಸಲಾಗಿದೆ. ಅಜಿತ್-ಆರವ್ ಪ್ರಯಾಣಿಸುತ್ತಿದ್ದ ಕಾರು ಹೇಗೆ ಅಪಘಾರವಾಯಿರು ಎನ್ನುವ ಮೂರು ವಿಡಿಯೋಗಳನ್ನು ಸುರೇಶ್‌ ಅವರು ಹಂಚಿಕೊಂಡಿದ್ದಾರೆ.

ಅಜಿತ್‌ ರಿಸ್ಕ್ ತೆಗೆದುಕೊಂಡು ಡ್ಯೂಪ್‌ ಇಲ್ಲದೆ ಈ ಚಿತ್ರದಲ್ಲಿ ಸಾಹಸ ದೃಶ್ಯಗಳಲ್ಲಿ ನಟಿಸುತ್ತಿದ್ದಾರೆ. ಈ ಪೈಕಿ ಅವರು, ಕಾರು ಅಪಘಾತ ದೃಶ್ಯದಲ್ಲಿ ಪ್ರಾಣದ ಹಂಗು ತೊರೆದು ನಟಿಸಿದ್ದಾರೆ. ಈ ಕುರಿತ ದೃಶ್ಯಗಳು (Ajith Kumar accident video from VidaaMuyarchi ) ಸಧ್ಯ ವೈರಲ್‌ ಆಗಿರುವ ವಿಡಿಯೋದಲ್ಲಿ ವೈರಲ್‌ ಆಗಿದೆ.

Share this content:

Leave a Reply

Your email address will not be published. Required fields are marked *