Mon. Aug 11th, 2025

Adhila nasrin and Fathima noora : ಬಿಗ್ ಬಾಸ್ ಸ್ಪರ್ಧಿಗಳ ಕುರಿತು ಚರ್ಚೆ ಜೋರಾಗಿದೆ. ದೊಡ್ಮನೆಗೆ ಯಾರ್‌ ಯಾರು ಬರ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ನೆಟ್ಟಿದೆ. ಈ ಪೈಕಿ ಇದೀಗ ಈ ರಿಯಾಲಿಟಿ ಶೋನಲ್ಲಿ ಸಲಿಂಗಕಾಮಿ ಜೋಡಿ ಪ್ರವೇಶ ಮಾಡಲಿದ್ದು, ಈ ಕುರಿತು ಬಿಗ್‌ ಅಪ್‌ಡೇಟ್ಸ್‌ ಹೊರಬಿದ್ದಿದೆ.

ಹೌದು.. ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಪ್ರಾರಂಭಕ್ಕೆ ದಿನಗಣನೆ ಶುರುವಾಗಿದೆ. ಅದರಂತೆ ಮಲಯಾಳಂನಲ್ಲಿಯೂ ಬಿಗ್‌ ಬಾಸ್‌ ಸೀಸನ್‌ 7 ಪ್ರಾರಂಭಕ್ಕೆ ಮೂಹೂರ್ತ ನಿಗದಿಯಾಗಿದೆ. ಇದರ ನಡುವೆ ಸ್ಪರ್ಧಿಗಳ ವಿಚಾರವಾಗಿ ಚರ್ಚೆಯೊಂದು ಮುನ್ನೆಲೆಗೆ ಬಂದಿದೆ.

ಏಕೆಂದರೆ ಈ ಬಾರಿ ಸಲಿಂಗಕಾಮಿ ದಂಪತಿಗಳಾದ ಅದಿಲಾ ನಸ್ರೀನ್ ಮತ್ತು ಫಾತಿಮಾ ನೂರಾ ಅವರಿಗೆ ಪ್ರದರ್ಶನದಲ್ಲಿ ಪ್ರವೇಶ ನೀಡಲಾಗಿದೆ. ಈ ಜೋಡಿ ಸಲಿಂಗ ಮದುವೆ ವಿಚಾರವಾಗಿ ಕೇರಳ ಹೈಕೋರ್ಟ್ನಲ್ಲಿ ಹೋರಾಡಿ, ಕೊನೆಗೆ ಒಟ್ಟಿಗೆ ವಾಸಿಸುವ ಹಕ್ಕನ್ನು ಗೆದ್ದು, ವಿವಾಹವಾಗುವ ಮೂಲಕ ಸುದ್ದಿಯಾಗಿದ್ದರು.

ಆದಿಲಾ ಮತ್ತು ಫಾತಿಮಾ ಸೌದಿ ಅರೇಬಿಯಾದಲ್ಲಿ ಅಧ್ಯಯನ ಮಾಡುವಾಗ ಭೇಟಿಯಾದರು. ಸ್ನೇಹವು ಕ್ರಮೇಣ ಪ್ರೀತಿಗೆ ತಿರುಗಿತು, ಆದರೆ ಕುಟುಂಬ ಮತ್ತು ಸಮಾಜವು ಅವರನ್ನು ಬೇರ್ಪಡಿಸಲು ಪ್ರಯತ್ನಿಸಿತು. ಇದರಿಂದಾಗಿ ಇಬ್ಬರೂ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಪ್ರಕರಣವನ್ನು ಗೆದ್ದರು.

Share this content:

Leave a Reply

Your email address will not be published. Required fields are marked *