Actor Darshan : ಚಾಲೆಜಿಂಗ್ ಸ್ಟಾರ್ ನಟ ದರ್ಶನ್ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಕೈ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಕೆಲವು ದಿನಗಳಿಂದ ಕೈನೋವಿನಿಂದ ಡಿಬಾಸ್ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗುವಂತೆ ವೈದ್ಯರು ತಿಳಿಸಿದರು.
ಇನ್ನು ಡಿಬಾಸ್ ಆದಷ್ಟು ಬೇಗ ಗುಣಮುಖರಾಗಲಿ ಅಂತ ಅವರ ಅಭಿಮಾನಿಗಳು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ʼಡೆವಿಲ್ʼ ಸಿನಿಮಾದ ಶೂಟಿಂಗ್ ವೇಳೆ ನಟ ದರ್ಶನ್ (Challenging Star Darshan Thoogudeepa) ಅವರ ಕೈಗೆ ಪೆಟ್ಟಾಗಿತ್ತು. ವೈದ್ಯರು ಅವರಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ. ಆದರೆ, ಕೆಲವೊಂದಿಷ್ಟು ಕಾರಣದಿಂದಾಗಿ ಕೈ ಆಪರೇಷನ್ ಅನ್ನು ಮುಂದೂಡಿದ್ದರು.
ಅದರಂತೆ ಇಂದು ದರ್ಶನ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಸ್ವತಃ ಅವರೇ ಹೇಳಿಕೊಂಡಿದ್ದರು. ಮಂಡ್ಯದಲ್ಲಿ ನಡೆದ ಸುಮಲತಾ ಅಂಬರೀಶ್ ಅವರ ಬೆಂಬಲಿಗರ ಸಭೆಯಲ್ಲಿ ಆಸ್ಪತ್ರೆಗೆ ಅಡ್ಮಿಟ್ ಆಗುವುದಾಗಿ ದರ್ಶನ್ ತಿಳಿಸಿದ್ದರು.
ಡೆವಿಲ್ ಸಿನಿಮಾ ಶೂಟಿಂಗ್ ವೇಳೆ ದರ್ಶನ್ ಅವರ ಕೈಗೆ ಪೆಟ್ಟಾಗಿತ್ತು. ನೋವಿನ ನಡುವೆ ಕೈಗೆ ಬೆಲ್ಟ್ ಕಟ್ಟಿಕೊಂಡೇ ಅವರು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಅಲ್ಲದೆ, ನಿನ್ನೆ ಮ್ಯಾಟ್ನಿ, ಜಾಜಿ ಸಿನಿಮಾಗಳ ಈವೆಂಟ್‌ನಲ್ಲಯೂ ಸಹ ಭಾಗವಹಿಸಿದ್ದರು.
Share this content: