Sun. Aug 10th, 2025

Ashwini Puneeth Rajkumar : ಕೇವಲ 1 ಮ್ಯಾಚ್‌ ಗೆದ್ದಿದ್ದು ಬಿಟ್ಟರೆ RCB IPL 2024ರಲ್ಲಿ 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಇದರಿಂದಾಗಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇದೇ ವೇಳೆ, ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಕಾರಣ ಎಂದು ಅಹವಹೇಳನಕಾರಿ ಪೋಸ್ಟ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಗಜಪಡೆ ಎಂಬ ಎಕ್ಸ್‌ (ಟ್ಟಿಟರ್‌) ಅಕೌಂಟ್‌ನಲ್ಲಿ ʼಶುಭಕಾರ್ಯಕ್ಕೆ ಮುತೈದೆಯರನ್ನು ಕರೀಬೇಕು, ಗಂಡ ಸತ್ತವರನ್ನ…. ಅಲ್ಲʼ ಎಂದು ಅಶ್ವಿನಿ ಪುನೀತ್‌ ಅವರ ಫೋಟೋ ಇರುವಂತಹ ಪೋಸ್ಟರ್‌ ಒಂದು ಹಂಚಿಕೊಳ್ಳಲಾಗಿದೆ. ಇದೀಗ ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಪುನೀತ್‌ ರಾಜ್‌ಕುಮಾರ್‌ ಅವರ ಅಭಿಮಾನಿಗಳು ಕೋಪಗೊಂಡಿದ್ದಾರೆ. ಆದರೆ, ಇದು ದರ್ಶನ್‌ ಅಭಿಮಾನಿಗಳ ಕೆಲಸವಲ್ಲ, ಬೇರೆ ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಎಂದು ನಟ ದರ್ಶನ್‌ ಅವರ ಫ್ಯಾನ್ಸ್‌ ಸಮರ್ಥಿಸಿಕೊಂಡಿದ್ದಾರೆ. ಇನ್ನು ಈ ವಿಚಾರ ದರ್ಶನ್ (Actor Darshan) ಅವರ ಗಮನಕ್ಕೂ ಬಂದಿದ್ದು, ಸಾಕಷ್ಟು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Share this content:

Leave a Reply

Your email address will not be published. Required fields are marked *