Priya varrier drunk video : ಸ್ಟಾರ್ ನಟಿಯೊಬ್ಬರು ಕುಡಿದ ಮತ್ತಿನಲ್ಲಿ ಹುಚ್ಚಿಯಂತೆ ವರ್ತಿಸಿದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ, ಚಿತ್ರ ವಿಚಿತ್ರವಾಗಿ ಮಾತನಾಡುತ್ತಿರುವ ನಟಿ ಮಾತುಗಳನ್ನು ಕೇಳಿ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಪ್ರಸ್ತುತ ಈ ಕ್ಲಿಪ್ ಟ್ರೇಂಡ್ ಆಗುತ್ತಿದೆ.
ಹೌದು.. ಪ್ರಿಯಾ ವಾರಿಯರ್ ತಮ್ಮ ಸೌಂದರ್ಯ ಮತ್ತು ನಟನೆಯಿಂದ ಕನ್ನಡ, ತೆಲುಗು, ಮಲಯಾಳಂ, ತಮಿಳಿನಲ್ಲಿ ಸಾಲು ಸಾಲು ಸಿನಿಮಾ ಮಾಡುತ್ತಿದ್ದಾರೆ. 2018 ರಲ್ಲಿ ತನಹಾ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಈ ಸುಂದರಿ, ಒರು ಆಧಾರ್ ಲವ್ ಚಿತ್ರದ ಮೂಲಕ ದೇಶಾದ್ಯಂತ ಭಾರಿ ಕ್ರೇಜ್ ಗಳಿಸಿದರು.
ಇತ್ತೀಚಿಗೆ ಪ್ರಿಯಾ “ಗುಡ್ ಬ್ಯಾಡ್ ಅಗ್ಲಿ” ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿನ ಚೆಲುವೆಯ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಿನಿಮಾಗಳ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಚೆಲುವೆ ಆಗಾಗ ಫೋಟೋಶೂಟ್ ಮೂಲಕ ಗಮನಸೆಳೆಯುತ್ತಿರುತ್ತಾಳೆ..
ಇತ್ತೀಚೆಗೆ, ಅವರು ಪಬ್‌ನಲ್ಲಿ ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ತಮ್ಮ ಸ್ನೇಹಿತರೊಂದಿಗೆ ಪಬ್‌ನಲ್ಲಿ ಮದ್ಯ ಸೇವಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ನೋಡಿದ ಅನೇಕ ನೆಟಿಜನ್‌ಗಳು ಮತ್ತು ಅವರ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
ಈ ವಿಡಿಯೋ ಹಳೆಯದಾದರೂ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ, ಪ್ರಿಯಾ ಈ ಘಟನೆ ಕುರಿತು ಯಾವುದೇ ಪ್ರತಿಕ್ರಿಯೆ ಮತ್ತು ಸ್ಪಷ್ಟತೆಯನ್ನು ನೀಡಿಲ್ಲ. ಒಟ್ಟಾರೆಯಾಗಿ ಚೆಲುವೆಯ ಈ ವಿಡಿಯೋ ಮಾತ್ರ ಸಖತ್ ವೈರಲ್ ಆಗುತ್ತಿದೆ.
Share this content: