Himanshi Narwhal Bigg Boss 19 : ಬಿಗ್ ಬಾಸ್ 19 ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಈ ಸೀಸನ್ ಅನ್ನು ಸಹ ಆಯೋಜಿಸಲಿದ್ದಾರೆ. ಈ ವರ್ಷದ ‘ಬಿಗ್ ಬಾಸ್’ನಲ್ಲಿ ಅನೇಕ ಹೊಸ ತಿರುವುಗಳನ್ನು ಮತ್ತು ಹೊಸ ಹೊಸ ಸ್ಪರ್ಧಿಗಳು ಎಂಟ್ರೀ ಕೊಡಲಿದ್ದು, ಇದು ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲವನ್ನು ಸೃಷ್ಟಿಸಿದೆ.
ಈ ಪೈಕಿ ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದ ಅಧಿಕಾರಿಯ ಪತ್ನಿಗೆ ಬಿಗ್ ಬಾಸ್ 19 ರ ಆಫರ್ ನೀಡಲಾಗಿದೆ ಎಂದು ಬಹಿರಂಗವಾಗುತ್ತಿದೆ. ಹಿಮಾಂಶಿ ನರ್ವಾಲ್ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ನೌಕಾ ಅಧಿಕಾರಿ ವಿನಯ್ ನರ್ವಾಲ್ ಅವರ ಪತ್ನಿ.
ಏಪ್ರಿಲ್ 22, 2025 ರಂದು ಈ ನವವಿವಾಹಿತ ಜೋಡಿ ಹನಿಮೂನ್‌ಗಾಗಿ ಕಾಶ್ಮೀರಕ್ಕೆ ಹೋಗಿದ್ದರು. ಹಠಾತ್ ದಾಳಿಯಲ್ಲಿ ವಿನಯ್ ಹುತಾತ್ಮರಾದರು ಮತ್ತು ಹಿಮಾಂಶಿ ಅವರ ಪಕ್ಕದಲ್ಲಿ ಕುಳಿತು ಅಸಹನೀಯ ದುಃಖದಲ್ಲಿ ಅಳುತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ಟೆಲಿ ಚಕ್ಕರ್ ವರದಿಯ ಪ್ರಕಾರ, ‘ಬಿಗ್ ಬಾಸ್ 19’ ನಿರ್ಮಾಪಕರು ಹಿಮಾಂಶಿ ಅವರನ್ನು ಕಾರ್ಯಕ್ರಮದಲ್ಲಿ ಕರೆತರುವ ಬಗ್ಗೆ ಯೋಚಿಸುತ್ತಿದ್ದಾರೆ. ಏಕೆಂದರೆ ಅವರ ಕಥೆ ಲಕ್ಷಾಂತರ ವೀಕ್ಷಕರ ಹೃದಯಗಳನ್ನು ಮುಟ್ಟುತ್ತದೆ ಎಂದು ಅವರು ಭಾವಿಸಿದ್ದಾರೆ ಎನ್ನಲಾಗಿದೆ.. ಆದರೂ ಈ ಬಗ್ಗೆ ಇನ್ನೂ ಅಧಿಕೃತ ದೃಢೀಕರಣವಿಲ್ಲ.
ಬಿಗ್ ಬಾಸ್ 19 ಆಗಸ್ಟ್ 24, 2025 ರಂದು ಪ್ರಾರಂಭಗೊಳ್ಳಲಿದೆ. ಈ ಕಾರ್ಯಕ್ರಮ ಜಿಯೋಹಾಟ್‌ಸ್ಟಾರ್‌ನಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಕಲರ್ಸ್ ಟಿವಿಯಲ್ಲಿ ರಾತ್ರಿ 10:30 ಕ್ಕೆ ಪ್ರಸಾರವಾಗಲಿದೆ. ಈ ವರ್ಷದ ಸೀಸನ್ 15 ವಾರಗಳ ಬದಲು 20 ರಿಂದ 22 ವಾರಗಳವರೆಗೆ ನಡೆಯುವ ಸಾಧ್ಯತೆ ಹೆಚ್ಚಿದೆ.
Share this content: