Actress Vasuki interview : ಕಾಲ ಬದಲಾದಂತೆ.. ಇಂದು ಮೇಲಿದ್ದವರು ನಾಳೆ ಕೆಳಗೆ.. ಕೆಳಗಿದ್ದವರು ಮೇಲೆ.. ಹೀಗೆ ಭಗವಂತ ಆಟವಾಡಿಸಿದಂತೆ ನಾವು ಆಡಲೇಬೇಕು.. ಈ ಪೈಕಿ ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಮೆರೆದ ಈ ಹೀರೋಯಿನ್ ಇಂದು ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿದ್ದು, ಭಿಕ್ಷೆ ಬೇಡಲು ಸಹ ಸಿದ್ಧರಾಗಿದ್ದಾರೆ..
ಹೌದು.. ಸಿನಿಮಾ ಲೋಕಕ್ಕೆ ಬಂದ್ರೆ, ಐಶಾರಾಮಿ ಜೀವನ ನಡೆಸಬಹುದು ಅಂತ ಭಾವಿಸಿದ್ದರೆ ಅದು ಸುಳ್ಳು.. ಟೈಮ್ ಇದ್ದಾಗಲೇ ಹಣ ಕೂಡಿಟ್ಟುಕೊಂಡು ಬೇರೆ ಬ್ಯುಸಿನೆಸ್ ಮಾಡಿದರೆ ಉತ್ತಮ.. ಇಲ್ಲ ಸಿನಿಮಾದಿಂದಲೇ ಶ್ರೀಮಂತನಾಗುತ್ತೇನೆ ಅಂತ ಬಂದ್ರೆ ತುಂಬಾ ಕಷ್ಟ.. ಸ್ಟಾರ್ ಗಿರಿ ಕಡಿಮೆಯಾದ್ರೆ ನಾಯಿ ಸಹ ಮೂಸಿ ನೋಡಲಲ್ಲ… ಫ್ಯಾನ್ಸ್ ಹತ್ತಿರವೂ ಬರಲ್ಲ..
ಒಂದು ಕಾಲದಲ್ಲಿ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದ ನಟಿ ವಾಸುಕಿ ಇದೀಗ ಸಂಗಾತಿ ಇಲ್ಲದೆ, ಆದಾಯವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ತಮಿಳು ಚಿತ್ರರಂಗದಲ್ಲಿ ಹಿರಿಯ ಹಾಸ್ಯ ನಟರಾದ ಗೌಂಡಮಣಿ ಮತ್ತು ಸೆಂಥಿಲ್ ಅವರೊಂದಿಗೆ ಅನೇಕ ಸಿನಿಮಾಗಳಲ್ಲಿ ವಾಸುಕಿ ನಟಿಸಿದ್ದಾರೆ. ತಮಿಳಿನಲ್ಲಿಯೇ ಸುಮಾರು 75 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ..
ವಾಸುಕಿ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕಾರೈಕುಡಿಯಲ್ಲಿ ಜನಿಸಿದರು. 16ನೇ ವಯಸ್ಸಿನಲ್ಲಿ ಪೋಷಕ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.. ತಮಿಳಿನಲ್ಲಿ ಹಾಸ್ಯ ನಟಿಯಾಗಿದ್ದರೂ, ತೆಲುಗು ಚಿತ್ರರಂಗದಲ್ಲಿ ಹೆಚ್ಚು ಗಮನಸೆಳೆದರು. ಮೋಹನ್ ಬಾಬು ನಟನೆಯ ‘ಅಸೆಂಬ್ಲಿ ರೌಡಿ’, ‘ರೌಡಿಗಾರಿ ಪೆಲ್ಲಾಮ್’, ‘ಮಾಮ ಕರು’, ‘ರೌಡಿ ಇನ್ಸ್‌ಪೆಕ್ಟರ್’, ‘ಸಿಟ್ಟೆಮ್ಮ ಮೊಗುಡು’, ‘ಬ್ರಹ್ಮ’, ‘ಪೆದರಾಯುಡು’, ‘ರೌಡಿ ಎಂಎಲ್‌ಎ’, ‘ಅಮ್ಮ ರಾಜಿನಾಮ’, ‘ಸೀದಾರಥಿನಂ ಕೇರಿ ಅಪ್ಪಯ್ಯ’, ‘ಅನ್ನಮೈಯ್ಯ’ ಮುಂತಾದ ಅನೇಕ ಯಶಸ್ವಿ ಚಿತ್ರಗಳಲ್ಲಿ ಕಾಣಿಸಿಕೊಂಡು ನಟಿ ಪ್ರೇಕ್ಷಕರ ಮನ ಗೆದ್ದಿದ್ದರು.
ಅಷ್ಟೇ ಅಲ್ಲ, ಚಲನಚಿತ್ರಗಳಲ್ಲಿ ನಟಿಸುತ್ತಲೇ ರಾಜಕೀಯದಲ್ಲೂ ತೊಡಗಿಸಿಕೊಂಡರು. ಆಗಿನ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ನೇತೃತ್ವದಲ್ಲಿ ಎಐಎಡಿಎಂಕೆ ಸೇರಿ, ಪಕ್ಷದ ಪ್ರಚಾರದಲ್ಲಿ ಸಕ್ರಿಯವಾಗಿದ್ದರು. ಇನ್ನು ದಾಂಪತ್ಯ ಜೀವನದ ಬಗ್ಗೆ ಹೇಳುವುದಾದರೆ, ವಾಸುಕಿ, ರಾಜ್‌ಕುಮಾರ್ ಎಂಬ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾದರು, ಆದರೆ ಸಂಸಾರ ಅಷ್ಟಾಗಿ ಸುಖದ ಹಾದಿ ಹಿಡಿಯಲಿಲ್ಲ, ನಟಿಯ ಪತಿ ಮದ್ಯದ ಚಟಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡರು.
ಈಗಾಗಲೇ ತಂದೆಯನ್ನು ಕಳೆದುಕೊಂಡಿದ್ದ ವಾಸುಕಿ, ತಾಯಿ ತಾಯಿಗೆ ಕ್ಯಾನ್ಸರ್ ಬಂದಾಗ, ತಾನು ಉಳಿಸಿದ್ದ ಹಣವನ್ನೇಲ್ಲಾ ಖರ್ಚು ಮಾಡಿದರು.. ಆದರೂ ಪ್ರಯೋಜನವಾಗಲಿಲ್ಲ. ತಾಯಿ ತೀರಿಕೊಂಡ ನಂತರ ಒಂಟಿಯಾದಳು. ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವಂತವಾಗಿರುವವರೆಗೂ, ವಾಸುಕಿಗೆ ಯಾವುದೇ ಆರ್ಥಿಕ ಸಮಸ್ಯೆಗಳಿರಲಿಲ್ಲ. ಅವರು ನಿಧನರಾದ ನಂತರ, ವಾಸುಕಿಗೆ ಹೊಟ್ಟೆಯಲ್ಲಿ ಮೂರು ಗೆಡ್ಡೆಗಳು ಇರುವುದು ಪತ್ತೆಯಾಯಿತು, ತನ್ನ ವೈದ್ಯಕೀಯ ವೆಚ್ಚಕ್ಕಾಗಿ ಇದ್ದ ಬದ್ದ ಅಲ್ಪ ಸ್ವಲ್ಪ ಹಣ ಮತ್ತು ಆಭರಣಗಳನ್ನು ಖರ್ಚು ಮಾಡಿ, ಸಂಪೂರ್ಣ ಬೀದಿಗೆ ಬಂದರು.
ಇನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ, ವಾಸುಕಿ ಅವರು ಅನೇಕ ಜನರಿಂದ ಸಹಾಯ ಕೇಳಿದ್ದರೂ ಯಾರೂ ಸಹಾಯಹಸ್ತ ಚಾಚಲಿಲ್ಲ ಅಂತ ದುಃಖವನ್ನು ತೋಡಿಕೊಂಡರು.. ಕೆಲಸ ಕೇಳಿದರೂ ಯಾರೂ ಕೆಲಸ ನೀಡಲು ಸಿದ್ಧರಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ಪ್ರಸ್ತುತ ಭಿಕ್ಷೆ ಬೇಡಲೂ ಸಿದ್ಧನಿದ್ದೇನೆ ಎಂದು ನಟಿ ಕಣ್ಣೀರಿಟ್ಟರು..
Share this content: