Suriya Daughter diya suriya : ಕಾಲಿವುಡ್ ಸ್ಟಾರ್ ಹೀರೋ ಸೂರ್ಯ ಅವರ ಬಗ್ಗೆ ಹೆಚ್ಚಾಗಿ ಪರಿಚಯ ಬೇಕಿಲ್ಲ. ಈಗಾಗಲೇ ತಮ್ಮ ನಟನೆಯ ಮೂಲಕ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.. ಇನ್ನು ಇತ್ತೀಚಿಗೆ ಸೂರ್ಯ ಜ್ಯೋತಿಕಾ ದಂಪತಿ ತಿರುಮಲಕ್ಕೆ ಭೇಟಿ ನೀಡಿದರು. ಈ ವೇಳೆ ಎಲ್ಲರ ಕಣ್ಣು ಅವರ ಪುತ್ರಿಯ ಮೇಲಿತ್ತು..
ಹೌದು.. ಸೂರ್ಯನ ದತ್ತಿ ಪ್ರತಿಷ್ಠಾನ ‘ಅಗರಂ’ ನ 15 ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ ಕಮಲ್ ಹಾಸನ್ ಮುಖ್ಯ ಅತಿಥಿಯಾಗಿದ್ದರು. ಈ ಸಮಾರಂಭದ ನಂತರ, ಸೂರ್ಯ ಮತ್ತು ಜ್ಯೋತಿಕಾ ತಿರುಮಲಕ್ಕೆ ಭೇಟಿ ನೀಡಿದರು.
ಸೂರ್ಯ ಜ್ಯೋತಿಕಾ (Suriya) ತಮ್ಮ ಮಗಳು ದಿಯಾ (Diya Suriya) ಮತ್ತು ಮಗ ದೇವ್ ಜೊತೆ ತಿಮ್ಮಪ್ಪನ ದರ್ಶನ ಪಡೆದರು. ನಟನನ್ನು ನೋಡಲು ಅಭಿಮಾನಿಗಳು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಫೋಟೋಗಳು ಮತ್ತು ಸೆಲ್ಫಿಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.
ಈ ವೇಳೆ ವಿಶೇಷವಾಗಿ ಸೂರ್ಯ ಅವರ ಮಗಳು ದಿಯಾ ಎಲ್ಲರ ಗಮನ ಸೆಳೆದಳು. ಸಾಂಪ್ರದಾಯಿಕ ಶೈಲಿಯಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡರು. ಥೆಟ್ ಅಪ್ಪನ ಕಣ್ಣು, ಅಮ್ಮನ ಮುಖ.. ಅಪರೂಪದ ಸೌಂದರ್ಯವತಿ ದಿಯಾ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಅಂದಹಾಗೆ, ನಟ ಸೂರ್ಯ ಅವರು “ಅಗರಂ ಫೌಂಡೇಶನ್”ನನ್ನು (surya agaram foundation) ತಮಿಳುನಾಡಿನ ಹಿಂದುಳಿದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸ್ಥಾಪಿಸಿದ ಸಂಸ್ಥೆಯಾಗಿದೆ. ಈ ಫೌಂಡೇಶನ್ ಮೂಲಕ, ಇಲ್ಲಿಯವರೆಗೆ, ಅನೇಕ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ. ಸುಮಾರು 6700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವೀಧ ಪಡೆದಿದ್ದಾರೆ.
Share this content: