Bigg Boss Ayesha jet : ಕಿರುತೆರೆಯ ನಟಿಯೊಬ್ಬರು ಖಾಸಗಿ ಜೆಟ್ ಖರೀದಿಸಿದ್ದಾರೆ. ಈ ಕುರಿತು ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೆ ನಟಿ ತಾವು ಜೆಟ್ ಕೊಂಡುಕೊಂಡಿದ್ದರ ಬಗ್ಗೆ ಅಧಿಕೃತವಾಗಿ ಏನನ್ನೂ ಘೋಷಿಸಿಲ್ಲ.. ಚಿತ್ರಗಳು ಮಾತ್ರ ನೆಟ್ಟಿಗರ ಗಮನಸೆಳೆಯುತ್ತಿವೆ..
ಕಿರುತೆರೆ ನಟಿಯರೂ ಸಹ ಸ್ಟಾರ್ ಹೀರೋಯಿನ್ ಲೆವೆಲ್‌ಗೆ ಇಂದು ಗಳಿಕೆ ಕಾಣುತ್ತಿದ್ದಾರೆ. ಅಷ್ಟೇ ಅಲ್ಲ, ಅದೇ ರೇಂಜ್‌ಗೆ ಅಭಿಮಾನಿಗಳನ್ನು ಸಹ ಹೊಂದಿದ್ದಾರೆ. ಪ್ರಸ್ತುತ ಕಿರುತೆಗೆ ನಟಿ, ‘ಬಿಗ್ ಬಾಸ್’ ಮಾಜಿ ಸ್ಪರ್ಧಿಯೊಬ್ಬರ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿವ ವೈರಲ್ ಆಗಿದ್ದು, ಹೊಸ ಜೆಟ್ ಖರೀದಿ ಮಾಡಿದ್ಳಾ ಸುಂದರಿ ಎನ್ನುವ ಡೌಟ್ ಮೂಡಿಸಿವೆ
ಹೌದು.. ನಟಿ ಆಯೇಷಾ ಜೆಟ್ ವಿಮಾನದಲ್ಲಿ ಕುಳಿತು ಕ್ಯಾಮರಾಗೆ ಫೋಸ್ ನೀಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಚಿತ್ರಗಳನ್ನು ನೋಡಿದ ನೆಟ್ಟಿಗರು ನಟಿ ಹೊಸ ವಿಮಾನ ಖರೀದಿ ಮಾಡಿದ್ದಾರೆ ಅಂತ ಸುದ್ದಿ ಹಬ್ಬಿಸಿದ್ದಾರೆ. ಆದರೆ ಈ ಕುರಿತು ಆಯೇಷಾ ಯಾವುದೇ ಹೇಳಿಕೆ ನೀಡಿಲ್ಲ..
ಆಯೇಷಾ ವಿಜಯ್ ಆಂಟೋನಿ ಅವರ ಮುಂಬರುವ ಚಿತ್ರ ‘ಲಾಯರ್’ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಜೀ ತಮಿಳಿನಲ್ಲಿ ಪ್ರಸಾರವಾಗುತ್ತಿರುವ ‘ಸೂಪರ್ ಕ್ವೀನ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ತೆಲುಗಿನಲ್ಲೂ ‘ಸಾವಿತ್ರಿಮ್ಮ ಕರಿ ಅಪ್ಪೈ’ ಸರಣಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇನ್ನು ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯರಾಗಿರುವ ಆಯೇಷಾ ಇತ್ತೀಚೆಗೆ ಪೋಸ್ಟ್ ಮಾಡಿರುವ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿವೆ. ಖಾಸಗಿ ಜೆಟ್ ನಲ್ಲಿ ಕುಳಿತಿರುವ ಫೋಟೋಗಳು ವೈರಲ್ ಆಗುತ್ತಿವೆ. ನಟಿ ನಿಜವಾಗಿಯೂ ಖಾಸಗಿ ಜೆಟ್ ಖರೀದಿಸಿದ್ದಾರಾ..? ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ..
Share this content: