Huma Qureshi brother death : ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ಖ್ಯಾತ ನಟಿಯ ಸಹೋದರನ ಕೊಲೆ ನಡೆದಿದೆ. ಸ್ಕೂಟಿ ಪಾರ್ಕಿಂಗ್ ವಿಚಾರವಾಗಿ ಈ ಹತ್ಯೆ ನಡೆದಿದೆ ಎಂದು ತಿಳಿದು ಬಂದಿದೆ. ಯಾರು ಆ ನಟಿ.. ಅಸಲಿಗೆ ಆಗಿದ್ದೇನು..? ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು.. ಆಘಾತಕಾರಿ ಘಟನೆಯೊಂದು ಬೆಳಕಿಗೆ ಬರುತ್ತಿದೆ. ಪಾರ್ಕಿಂಗ್ ವಿವಾದದ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಹುಮಾ ಖುರೇಷಿ ಅವರ ಸಹೋದರನ ಕೊಲೆಯಾಗಿದೆ. ದೆಹಲಿಯ ನಿಜಾಮುದ್ದೀನ್‌ನಲ್ಲಿ ಪಾರ್ಕಿಂಗ್ ವಿವಾದದ ಹಿನ್ನೆಲೆಯಲ್ಲಿ ಹುಮಾ ಅವರ ಸಹೋದರ ಆಸಿಫ್ ಖುರೇಷಿಯನ್ನು ಹತ್ಯೆ ಮಾಡಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಗುರುವಾರ ರಾತ್ರಿ ನಿಜಾಮುದ್ದೀನ್‌ನ ಜಂಗ್‌ಪುರ ಭೋಗಲ್ ಬಜಾರ್ ಲೇನ್‌ನಲ್ಲಿ ಮನೆಯ ಗೇಟ್‌ನಿಂದ ಸ್ಕೂಟಿಯನ್ನು ತೆಗೆದು ಪಕ್ಕದಲ್ಲಿ ನಿಲ್ಲಿಸಿದ್ದಕ್ಕಾಗಿ ಜಗಳ ನಡೆದಿತ್ತು ಎಂದು ಮಾಹಿತಿ ಸಿಕ್ಕಿದೆ. ಈ ಕಾರಣಕ್ಕಾಗಿ, ಆರೋಪಿಗಳು ನಟಿಯ ಸಹೋದರನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಯಲ್ಲಿ ಹುಮಾ ಖುರೇಷಿಯ ಸಹೋದರ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.
ಹುಮಾ ಖುರೇಷಿಯವರ ಅತ್ತಿಗೆ, ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಅವರ ಪತಿ ಮತ್ತು ನೆರೆಹೊರೆಯವರ ನಡುವೆ ಜಗಳವಾಗಿತ್ತು ಎಂದು ಮಾಹಿತಿ ನೀಡಿದ್ದಾರೆ. ನನ್ನ ಪತಿ ಕಚೇರಿಯಿಂದ ಮನೆಗೆ ಬಂದಿದ್ದರು, ನೆರೆಹೊರೆಯವರ ಕಾರು ನಮ್ಮ ಮನೆಯ ಮುಂದೆ ನಿಂತಿತ್ತು. ಈ ಸಮಯದಲ್ಲಿ, ಅವರನ್ನು ತಮ್ಮ ಸ್ಕೂಟರ್‌ಗಳನ್ನು ಸ್ಥಳದಿಂದ ತೆಗೆದು ಬೇರೆಡೆ ನಿಲ್ಲಿಸಲು ಕೇಳಿಕೊಂಡರು.
ನೆರೆಹೊರೆಯವರು ಸುಮ್ಮನಾಗಲಿಲ್ಲ, ನನ್ನ ಗಂಡನನ್ನು ನಿಂದಿಸಲು ಪ್ರಾರಂಭಿಸಿದರು. ಆ ನಂತರ ಜಗಳ ನೇರವಾಗಿ ಹಲ್ಲೆ ನಡೆಸುವ ಹಂತಕ್ಕೆ ಹೋಯಿತು. ದಾಳಿಯಲ್ಲಿ ನನ್ನ ಪತಿ ಗಂಭೀರವಾಗಿ ಗಾಯಗೊಂಡಿದ್ದರು. ನಾವು ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು ಆದರೆ ಅವರು ಮೃತಪಟ್ಟರು ಎಂದು ಘಟನೆಯನ್ನು ವಿವರಿಸಿದ್ದಾರೆ.
ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನೆರೆಹೊರೆಯವರ ನಡುವೆ ಬೇರೆ ಯಾವುದೇ ವಿವಾದಗಳಿವೆಯೇ..? ಎಂಬ ವಿಚಾರವಾಗಿಯೂ ತನಿಖೆ ಮಾಡಲಾಗುತ್ತಿದೆ. ಆಸಿಫ್ ಖುರೇಷಿ ಬಾಲಿವುಡ್ ನಟಿ ಹುಮಾ ಖುರೇಷಿ ಅವರ ಸೋದರಸಂಬಂಧಿಯಾಗಿದ್ದಾರೆ.
Share this content: