Actress Life : ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಪ್ರಕರಣಗಳು ಸೇರಿದಂತೆ ನಟಿಯರ ಮೇಲಿನ ಕಿರುಕುಳದಂತಹ ಘಟನೆಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಈ ಪೈಕಿ ಇದೀಗ ಸ್ಟಾರ್ ನಟಿಯೊಬ್ಬರಿಗೆ ನಿರ್ಮಾಪಕ ಕಾಟ ಕೊಟ್ಟ ಘಟನೆ ಬಹಿರಂಗವಾಗಿದೆ. ಅಚ್ಚರಿ ವಿಚಾರ ಅಂದ್ರೆ ನಟಿ ಗರ್ಭಿಣಿಯಾಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಹೌದು.. ಬಹುಭಾಷಾ ನಟಿ ರಾಧಿಕಾ ಆಪ್ಟೆ (Radhika Apte ) ಇಂದು ಭಾರತದಾದ್ಯಂತ ಹೆಸರುವಾಸಿಯಾಗಿದ್ದಾರೆ. ತಮ್ಮ ನಟನೆ ಮತ್ತು ಸೌಂದರ್ಯದಿಂದ ಬಾಲಿವುಡ್‌ನಲ್ಲಿ ತಮ್ಮದೇ ಆದ ಸ್ಥಾನ ಹೊಂದಿದ್ದಾರೆ. ಪ್ರಸ್ತುತ ರಾಧಿಕಾ ತಮಗೆ ಸಂಭವಿಸಿದ ಆಘಾತಕಾರಿ ಘಟನೆಯನ್ನು ವಿವರಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.
ರಾಧಿಕಾ ಆಪ್ಟೆ ಅವರು ಗರ್ಭಿಣಿಯಾಗಿದ್ದಾಗ ನಿರ್ಮಾಪಕರೊಬ್ಬರು ತಮ್ಮೊಂದಿಗೆ ತುಂಬಾ ಕೆಟ್ಟದಾಗಿ ವರ್ತಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ತಾವು ಗರ್ಭಿಣಿಯಾಗಿದ್ದ ವಿಚಾರ ತಿಳಿದು ನಿರ್ಮಾಪಕರಿಗೆ ಬೇಸರವಾಯಿತ ಎಂಬ ಶಾಕಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ.
ನೇಹಾ ಧೂಪಿಯಾ ಅವರ ಫ್ರೀಡಂ ಟು ಫೀಡ್ ಲೈವ್ ಸೆಷನ್‌ನಲ್ಲಿ (Neha Dhupia Freedom to Feed live session) ಈ ಘಟನೆಯನ್ನು ನೆನಪಿಸಿಕೊಂಡ ರಾಧಿಕಾ.. “ನಾನು ಒಬ್ಬ ನಿರ್ಮಾಪಕರೊಂದಿಗೆ ಕೆಲಸ ಮಾಡುತ್ತಿದ್ದೆ. ಅವರಿಗೆ ನಾನು ಗರ್ಭಿಣಿಯಾಗಿದ್ದು ಇಷ್ಟವಾಗಲಿಲ್ಲ. ಅಲ್ಲದೆ, ಆಗ ನನ್ನ ತೂಕ ಹೆಚ್ಚಾಗುತ್ತಿತ್ತು, ಇದರ ಹೊರತಾಗಿಯೂ, ಅವರು ತಮ್ಮ ಯೋಜನೆಗಾಗಿ ನನಗೆ ಕಡಿಮೆ ಬಟ್ಟೆಗಳನ್ನು ಧರಿಸುವಂತೆ ಮಾಡಿದರು’ ಎಂದು ಆಘಾತಕಾರಿ ಘಟನೆಯನ್ನು ಹಂಚಿಕೊಂಡರು.
ಮುಂದುವರೆದು ಮಾತನಾಡಿದ ರಾಧಿಕಾ ಆಪ್ಟೆ, ನಾನು ಇಷ್ಟೆಲ್ಲಾ ಸಹಿಸಿಕೊಂಡಿದ್ದರೂ, ನನಗೆ ಅನಾರೋಗ್ಯ ಅನಿಸಿದ್ದರಿಂದ ವೈದ್ಯರ ಬಳಿಗೆ ಹೋಗಬೇಕೆಂದುಕೊಂಡಿದ್ದೆ. ಆದರೆ ಆ ನಿರ್ಮಾಪಕರು ನನಗೆ ವೈದ್ಯರ ಬಳಿಗೆ ಹೋಗಲು ಬಿಡಲಿಲ್ಲ ಎಂದು ನಟಿ ನೋವನ್ನು ತೋಡಿಕೊಂಡರು.
Share this content: