Fri. Aug 8th, 2025

Lishalliny Kanaran : ಮಲೇಷ್ಯಾದ ರೂಪದರ್ಶಿಯೊಬ್ಬರು ಅರ್ಚಕರೊಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಆಶೀರ್ವಾದ ಮಾಡುವ ನೆಪದಲ್ಲಿ ತಮ್ಮ ರವಿಕೆ ಒಳಗೆ ಕೈ ಬಿಟ್ಟಿದ್ದಾರೆ ಎಂದು ದೂರಿದ್ದಾರೆ. ಈ ಕುರಿತ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ಮಲೇಷ್ಯಾ ರೂಪದರ್ಶಿ ಲಿಶಲ್ಲಿನಿ ಕನರನ್ ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ. ಕಳೆದ ಶನಿವಾರ ಸೆಪಾಂಗ್‌ನ ಮಾರಿಯಮ್ಮನ್ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ ಎಂದು ವಿವರಿಸಿದ್ದಾರೆ. ಮಾಡೇಲ್‌ ಆರೋಪದ ಹಿನ್ನೆಲೆ ಪೊಲೀಸರು ಅರ್ಚಕರಿಗಾಗಿ ಹುಡುಕಾಟ ನಡೆಸಿದ್ದಾರೆ. ಕನರನ್ 2021 ರಲ್ಲಿ ಮಿಸ್ ಗ್ರ್ಯಾಂಡ್ ಮಲೇಷ್ಯಾ ಕಿರೀಟವನ್ನು ಪಡೆದರು.

ಅಷ್ಟೇ ಅಲ್ಲ, ತನಿಖಾಧಿಕಾರಿಯಿಂದ ತಮಗೆ ಬೆದರಿಕೆ ಬಂದಿದೆ ಎಂದು ಲಿಶಲ್ಲಿನಿ ಆರೋಪಿಸಿದ್ದಾರೆ. “ಆ ದಿನ, ನಾನು ಪ್ರಾರ್ಥಿಸುತ್ತಿರುವಾಗ, ಅವನು ನನ್ನ ಬಳಿಗೆ ಬಂದು, ನನಗೆ ಸ್ವಲ್ಪ ಪವಿತ್ರ ನೀರು ಮತ್ತು ಕಟ್ಟಿಕೊಳ್ಳಲು ದಾರ ನೀಡಿದ. ಆಗ ಆಶೀರ್ವಾದ ಮಾಡುವ ನೆಪದಲ್ಲಿ ಅನುಚಿತವಾಗಿ ನಡೆದುಕೊಂಡ ಎಂದು ಘಟನೆಯ ಕುರಿತು ಲಿಶಲ್ಲಿನಿ ಕನರನ್‌ ವಿವರಿಸಿದ್ದಾರೆ.

Share this content:

Leave a Reply

Your email address will not be published. Required fields are marked *