Fri. Aug 8th, 2025

Actress Harassed Gurugram : ಇತ್ತೀಚಿಗೆ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕ್ಯಾಬ್‌ಗಾಗಿ ಕಾಯುತ್ತಿದ್ದ ನಟಿಯ ಮುಂದೆ ವ್ಯಕ್ತಿಯೊಬ್ಬ ವಿಚಿತ್ರವಾದ ಕೆಲಸಗಳನ್ನು ಮಾಡಿದ್ದಾನೆ. ಪ್ಯಾಂಟ್‌ನ ಜಿಪ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ನಟಿ ಈ ಘಟನೆಯನ್ನು ತನ್ನ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ..

ಹೌದು.. ಹಾಡಹಗಲೇ ನಟಿ ಮತ್ತು ರೂಪದರ್ಶಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಫೇಸ್‌ ಮಾಸ್ಕ್‌ ಧರಿಸಿದ ಯುವಕನೊಬ್ಬ ಆಕೆಯ ಮುಂದೆಯೇ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಈ ಭೀಕರ ದೃಶ್ಯವನ್ನು ನಟಿ ತಮ್ಮ ಮೊಬೈಲ್‌ ಫೋನ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದಾಳೆ.

ಸಂತ್ರಸ್ತ ಮಾಡೆಲ್ ತಾನು ಜೈಪುರದಿಂದ ಹಿಂತಿರುಗಿ ಗುರುಗ್ರಾಮ್‌ನ ರಾಜೀವ್ ಚೌಕ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಇಳಿದಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಕ್ಯಾಬ್ ಬುಕ್ ಮಾಡಿ ಕಾಯುತ್ತಿದ್ದಾಗ, ಆ ಸಮಯದಲ್ಲಿ, ಒಬ್ಬ ವ್ಯಕ್ತಿ ಅವಳನ್ನು ನೋಡುತ್ತಲೇ ಇದ್ದನಂತೆ, ಅಲ್ಲದೆ, ವಿಚಿತ್ರ ಸನ್ನೆಗಳನ್ನು ಮಾಡುತ್ತಿದ್ದ ಎಂದು ನಟಿ ಹೇಳಿಕೊಂಡಿದ್ದಾನೆ.

ಆರಂಭದಲ್ಲಿ ಇದನ್ನೆಲ್ಲ ನಿರ್ಲಕ್ಷಿಸಿದರೂ, ಬಳಿಕ ಏಕಾಎಕಿ ವ್ಯಕ್ತಿ ತನ್ನ ಪ್ಯಾಂಟ್‌ನ ಜಿಪ್ ತೆರೆದು ಅವಳನ್ನು ನೋಡಿ, ಅಸಭ್ಯ ಕೃತ್ಯ ಎಸಗಿದ್ದಾನೆ. ಈ ಎಲ್ಲಾ ಆಘಾತಕಾರಿ ಘಟನೆಯನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಪ್ರಸ್ತುತ ಸೋಷಿಯಲ್‌ ಮೀಡಿಯಾದಲ್ಲಿ ನೋವು ತೋಡಿಕೊಂಡಿದ್ದಾಳೆ.

ಅದನ್ನೆಲ್ಲಾ ನೋಡಿದ ನಂತರ ನನಗೆ ತುಂಬಾ ಅಸಹ್ಯವಾಯಿತು. ಈ ಘಟನೆಯ ಸಮಯದಲ್ಲಿ ನಾನು ತುಂಬಾ ಭಯಭೀತಳಾಗಿದ್ದೆ. ನನ್ನ ಕೈಯಲ್ಲಿ ಏನೂ ಇರಲಿಲ್ಲ, ನನಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ನಾನು ಮೊದಲು ಬುಕ್ ಮಾಡಿದ ಕ್ಯಾಬ್‌ನ ಚಾಲಕ ಫೋನ್ ಎತ್ತುತ್ತಿರಲಿಲ್ಲ. ನಂತರ ನಾನು ಇನ್ನೊಂದು ಕ್ಯಾಬ್ ಬುಕ್ ಮಾಡಿದೆ. ಈ ಮಧ್ಯೆ, ನಾನು ಪೊಲೀಸರಿಗೆ ಕರೆ ಮಾಡಲು ಪ್ರಯತ್ನಿಸಿದೆ. ಆದರೆ ಅವರಿಗೆ ಫೋನ್ ಹೋಗಲಿಲ್ಲ ಅಂತ ಸಂತ್ರಸ್ತೆ ಹೇಳಿಕೊಂಡಿದ್ದಾಳೆ.

ಇದಷ್ಟೇ ಅಲ್ಲ, ಗೂಗಲ್‌ನಲ್ಲಿ ಹತ್ತಿರದ ಪೊಲೀಸ್ ಠಾಣೆಯ ಸಂಖ್ಯೆಯನ್ನು ಸಹ ಹುಡುಕಿದೆ. ದೂರು ದಾಖಲಿಸಲು ಠಾಣೆಗೆ ಬರಲು ನನ್ನನ್ನು ಕೇಳಲಾಗಿದೆ. ಈಗ ಪೊಲೀಸರು ಈ ಪ್ರಕರಣದಲ್ಲಿ ದೂರು ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವೀಡಿಯೊದಲ್ಲಿ ಆ ವ್ಯಕ್ತಿ ಸ್ಪಷ್ಟವಾಗಿ ಗೋಚರಿಸುತ್ತಿದ್ದರೂ, ಮಾಸ್ಕ್‌ ಧರಿಸಿದ್ದಾನೆ. ಪ್ರಕರಣದಲ್ಲಿ ಮಾಡೆಲ್ ಪೊಲೀಸರ ಮೇಲೆಯೂ ಕೋಪ ವ್ಯಕ್ತಪಡಿಸಿದಳು.

Share this content:

Leave a Reply

Your email address will not be published. Required fields are marked *