New Bigg Boss updates : ಬಿಗ್ ಬಾಸ್ ಹೊಸ ಸೀಸನ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ರಿಯಾಲಿಟಿ ಶೋ ಕುರಿತು ದಿನದಿಂದ ದಿನಕ್ಕೆ ಹಲವಾರು ಅಪ್‌ಡೇಟ್‌ಗಳು ಹೊರ ಬರುತ್ತಿವೆ. ಇದೀಗ ದೊಡ್ಮನೆಯಿಂದ ಹೊಸ ಸುದ್ದಿಯೊಂದು ಬಹಿರಂಗವಾಗಿದ್ದು, 40 ಜನಸಾಮಾನ್ಯರಿಗೆ ಅವಕಾಶ ನೀಡಲಾಗುತ್ತಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ.
ಈ ಸುದ್ದಿ ಕನ್ನಡ ಬಿಗ್‌ಬಾಸ್‌ದಲ್ಲ ಬದಲಿಗೆ ತೆಲುಗು ಬಿಗ್ ಬಾಸ್. ಹೌದು.. ಈ ಬಾರಿ ತೆಲುಗು ಬಿಗ್‌ಬಾಸ್ ಹೊಸ ಮುನ್ನುಡಿ ಬರೆಯುತ್ತಿದೆ. ಪ್ರತಿಭಾರಿಯೂ ಸೆಲೆಬ್ರಿಟಿಗಳೇ ದೊಡ್ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದ್ರೀಗ ಜನಸಾಮಾನ್ಯರೂ ಸಹ ಶಕ್ತಿ ಪ್ರಯೋಗ ಮಾಡಬಹುದು.
“ಬಿಗ್ ಬಾಸ್ ತೆಲುಗು 9 ಅಗ್ನಿಪರೀಕ್ಷೆ” ಎಂಬ (Bigg Boss Telugu 9 Agnipariksha) ಶೀರ್ಷಿಕೆಯಲ್ಲಿ ಮೊದಲು ಮಿನಿ ಶೋನೊಂದಿಗೆ ಪ್ರಾರಂಭವಾಗುತ್ತದೆ. ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ, 40 ಸಾಮಾನ್ಯ ಜನರಿಗೆ ಮನೆಗೆ ಪ್ರವೇಶಿಸಲು ಸ್ಪರ್ಧಿಸಲು ಅವಕಾಶ ನೀಡಲಾಗುತ್ತಿದೆ. ಈ ಹೊಸ ಪರಿಕಲ್ಪನೆಯು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಬಿಸಿ ವಿಷಯವಾಗಿದೆ.
ಸಾವಿರಾರು ಅರ್ಜಿಗಳಿಂದ ಫಿಲ್ಟರ್ ಮಾಡಿ, 40 ಜನರಿಗೆ ‘ಅಗ್ನಿಪರೀಕ್ಷಾ’ ಎಂಬ ಹೈ-ವೋಲ್ಟೇಜ್ ಸ್ಪರ್ಧೆಯನ್ನು ನೀಡಲಾಗುತ್ತದೆ. ಇಲ್ಲಿ ಗೆದ್ದವರು ಬಿಗ್‌ಬಾಸ್ ಮನೆ ಪ್ರವೇಶ ಮಾಡಿ ಸ್ಪರ್ಧೆ ಮಾಡಬಹುದು. ಭಾಗವಹಿಸುವವರ ದೈಹಿಕ ಶಕ್ತಿ ಮತ್ತು ಮಾನಸಿಕ ಗಟ್ಟಿತನದ ಪರೀಕ್ಷಿಸುವ ಸವಾಲುಗಳನ್ನು ಎದುರಿಸಬೇಕು. ಈ ಪರೀಕ್ಷೆಯಲ್ಲಿ ಗೆದ್ದು ಟಾಪ್ 3 ರಲ್ಲಿ ನಿಲ್ಲುವವರು ಸೆಲೆಬ್ರಿಟಿಗಳೊಂದಿಗೆ ಬಿಗ್ ಬಾಸ್ ಸೀಸನ್ 9 ಮನೆಗೆ ಭವ್ಯ ಪ್ರವೇಶ ಪಡೆಯುತ್ತಾರೆ.
ಈ ‘ಅಗ್ನಿಪರೀಕ್ಷೆ’ ಆಗಸ್ಟ್ 23, 2025 ರಂದು ಪ್ರಾರಂಭವಾಗಲಿದೆ. ಇದನ್ನು ‘ಜಿಯೋಹಾಟ್‌ಸ್ಟಾರ್’ ನಲ್ಲಿ ಪ್ರತ್ಯೇಕವಾಗಿ ಸ್ಟ್ರೀಮ್ ಮಾಡಲಾಗುತ್ತದೆ. ಈ ಮಿನಿ-ಸರಣಿಯ ಮೂಲಕ ಭಾಗವಹಿಸುವವರನ್ನು ಅವರ ಶಕ್ತಿ, ಮನಸ್ಸಿನ ಆಟ ಮತ್ತು ಮನರಂಜನಾ ಕೌಶಲ್ಯಗಳ ಮೇಲೆ ನಿರ್ಣಯಿಸಲಾಗುತ್ತದೆ.
ಈ ವಿಶೇಷ ವಿಭಾಗದ ಆತಿಥ್ಯದ ಜವಾಬ್ದಾರಿಯನ್ನು ಜನಪ್ರಿಯ ನಿರೂಪಕಿ ಮತ್ತು ಬಿಗ್ ಬಾಸ್ 3 ರ ರನ್ನರ್ ಅಪ್ ಶ್ರೀಮುಖಿ ವಹಿಸಿಕೊಂಡಿದ್ದಾರೆ. ಈ ಎಲ್ಲಾ ಸ್ಪರ್ಧೆಯ ನಂತರ ಮೂಲ ಬಿಗ್ ಬಾಸ್ 9 ಕಾರ್ಯಕ್ರಮ ಸೆಪ್ಟೆಂಬರ್ 7, 2025 ರಂದು ಪ್ರಾರಂಭವಾಗಲಿದೆ. ನಟ ಕಿಂಗ್ ನಾಗಾರ್ಜುನ ಹೋಸ್ಟಿಂಗ್ ಮಾಡಲಿದ್ದಾರೆ.
Share this content: