Sun. Aug 10th, 2025

Kabzaa Sharan bigg boss : ಆರ್‌ಸಿಬಿ ಪರ ಮಾತನಾಡುತ್ತ ನೆಟ್ಟಿಗರು ಕೊಟ್ಟ ಚಿತ್ರ ವಿಚಿತ್ರ ಟಾಸ್ಕ್‌ ಮಾಡುತ್ತ ವೈರಲ್‌ ಆದ ಕಬ್ಜಾ ಶರಣ್‌ ಇದೀಗ ಸೌಜನ್ಯ ಪರ ಹೋರಾಡುತ್ತ ಸುದ್ದಿಯಾಗಿದ್ದಾನೆ. ಪ್ರಸ್ತುತ ಟ್ರೇಂಡ್‌ ಕಾಪಾಡಿಕೊಂಡಿರುವ ಶರಣ್‌ ತಮಗೆ ಬಿಗ್‌ ಆಫರ್‌ ಬಂದಿರುವುದಾಗಿ ಹೇಳಿಕೊಂಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ಹೌದು.. ಧಮಸ್ಥಳ ಶವಗಳ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್‌ ಪಡೆಯುತ್ತಿದೆ. ಅಲ್ಲದೆ, ಸೌಜನ್ಯ ಪರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ. ಇದರ ನಡುವೆ ಹಲವಾರು ಯೂಟ್ಯೂಬರ್‌ಗಳು ಮುನ್ನೆಲೆ ಬರುತ್ತಿದ್ದಾರೆ. ಇಷ್ಟು ದಿನ ರೀಲ್ಸ್‌ ಮಾಡಿಕೊಂಡಿದ್ದವರೂ ಸಹ ಖ್ಯಾತಿ ಪಡೆಯುತ್ತಿದ್ದಾರೆ.

ಈ ಪೈಕಿ ಆರ್‌ಸಿಬಿ ಅಭಿಮಾನಿ ಅಂತ ಹೇಳಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ನೀಡುವ ಚಿತ್ರ ವಿಚಿತ್ರ ಟಾಸ್ಕ್‌ಗಳನ್ನು ಮಾಡುತ್ತಲೇ ವೈರಲ್‌ ಆಗಿದ್ದ ಕಬ್ಜಾ ಶರಣ್‌ ಸಹ ಒಬ್ಬ. ಕಳೆದ ಕೆಲವು ದಿನಗಳ ಹಿಂದೆ ಸೌಜನ್ಯ ಪರ ಪಾದಯಾತ್ರೆ ಮಾಡಿ ಸಂಚಲನ ಸೃಷ್ಟಿಸಿದ್ದ ಶರಣ್‌ ಸದ್ಯ ತಮ್ಮ ಅಭಿಮಾನಿಗಳ ಜೊತೆ ಸಂತೋಷದ ಸುದ್ದಿ ಹಂಚಿಕೊಂಡಿದ್ದಾನೆ.

ಈ ಕುರಿತು ವಿಡಿಯೋ ಶೇರ್‌ ಮಾಡಿರುವ ಶರಣ, ಆರ್‌ಸಿಬಿ ಮುಗಿತು ಇನ್ನು ಕಬ್ಜಾ ಕಥೆ ಮುಗಿತು ಅಂತ ಅಂದುಕೊಂಡಿದ್ದವರಿಗೆ ಶಾಕ್‌ ಕಾದಿದೆ. ನನಗೆ ಎಲ್ಲೆಲ್ಲಿಂದ ಕಾಲ್‌ ಬಂದಿತ್ತು ಗೊತ್ತೆ, ಯಾರ್‌ ಯಾರ್‌ ಕಾಲ್‌ ಮಾಡಿದ್ರು ಗೊತ್ತೆ ಇದಕ್ಕೆಲ್ಲಾ ನೀವೆ ಕಾರಣ ಅಂತ ವಿಡಿಯೋದಲ್ಲಿ ಅಸಲಿ ಮ್ಯಾಟರ್‌ ತಿಳಿಸಿದೆ ಕ್ಯೂರಿಯಾಸಿಟಿ ಹುಟ್ಟಿಸಿದ್ದಾನೆ

ಅಷ್ಟೇ ಅಲ್ಲ ಪಕ್ಕದಲ್ಲಿದವನೂ ಸಹ ಇನ್ಮುಂದೆ ಕಬ್ಜಾನನ್ನು ನೀವು ಮೊಬೈಲ್‌ನಲ್ಲಿ ನೋಡುತ್ತಿದ್ರೀ ಇನ್ಮುಂದೆ ಲೆವೆಲ್‌ ಬೇರೆ ಅಂತ ಹೊಗಳುವುದನ್ನು ಕಾಣಬಹುದು. ಸ್ವತಃ ಈ ವಿಡಿಯೋವನ್ನು @kabzaa_Sharan ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.. ಇದಕ್ಕೆ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ.. ಬಿಗ್‌ಬಾಸ್‌ಗೆ ಹೋಗೋಕೆ ಇಷ್ಟೇಲ್ಲಾ ನಾಟ ಮಾಡಿದ್ಯಾ ಅಂತ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.

Share this content:

Leave a Reply

Your email address will not be published. Required fields are marked *