Fri. Aug 8th, 2025

Behind the scenes : ಆ ಸಿನಿಮಾದ ದೃಶ್ಯವೊಂದಕ್ಕಾಗಿ ನನ್ನ ಬಟ್ಟೆಗಳನ್ನು ಬಿಚ್ಚಬೇಕಾಗಿತ್ತು. ಆದರೆ ನನಗೆ ತುಂಬಾ ಹೆದರಿಕೆ ಆಯ್ತು.. ಕೊನೆಗೆ ಆ ಹೀರೋ ನನ್ನ ಬಳಿ ಬಂದು.. ಸುಲಭವಾಗುವ ರೀತಿಯಲ್ಲಿ ಸಹಾಯ ಮಾಡಿದ.. ಎಂದು ಸ್ವತಃ ಸ್ಟಾರ್‌ ನಟಿ ಹೇಳಿಕೊಂಡಿದ್ದಾರೆ.. ಹಾಗಿದ್ರೆ, ಯಾರು ಆ ಚೆಲುವೆ.. ಎನ್‌ ಮ್ಯಾಟರ್‌..? ಬನ್ನಿ ನೋಡೋಣ

ಹೌದು.. ಸಿನಿಮಾ ಚಿತ್ರೀಕರಣ ಅಂದುಕೊಂಡಷ್ಟು ಸರಳವಲ್ಲ. ಕೆಲವೊಂದಿಷ್ಟು ವೇಳೆ ಮುಜುಗರ, ಅವಮಾನ, ನೋವು ಅನುಭವಿಸಬೇಕಾಗುತ್ತದೆ. ನಟಿಯರಂತೂ ತುಂಬಾ ಧೈರ್ಯದಿಂದಿರಬೇಕು.. ಹೆಚ್ಚಾಗಿ ರೊಮ್ಯಾಂಟಿಕ್‌ ದೃಶ್ಯಗಳನ್ನು ಚಿತ್ರೀಕರಿಸುವಾಗ, ವಿಶೇಷಕ ಕಾಳಜಿ ವಹಿಸಬೇಕು..

70-80 ರ ದಶಕದಲ್ಲಿ ಬೆಡ್‌ ರೂಮ್‌ ದೃಶ್ಯಗಳು ಬಹಳ ವಿರಳ. ಅಂತಹ ಕಾಲಗಟ್ಟದಲ್ಲಿಯೇ ನಟಿ ಸಿಮಿ ಗರೆವಾಲ್ ನಟಿಸಿದ ಒಂದು ದೃಶ್ಯ ಪ್ರೇಕ್ಷಕರ ಗಮನ ಸೆಳೆಯಿತು. ಯಸ್‌.. ಶಶಿ ಕಪೂರ್ ಮತ್ತು ಸಿಮಿ ‘ಸಿದ್ಧಾರ್ಥ್’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.. ಈ ಚಿತ್ರದಲ್ಲಿ ಒಂದು ರೊಮ್ಯಾಂಟಿಕ್‌ ದೃಶ್ಯವಿದೆ. ಇದರ ಚಿತ್ರೀಕರಣದ ವೇಳೆ ನಡೆದ ಅನುಭವವನ್ನು ಸಿಮಿ ಇತ್ತೀಚಿಗೆ ವಿವರಿಸಿದ್ದಾರೆ.

ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ ಅವರು, ‘ಆ ದೃಶ್ಯ ನನಗೆ ತುಂಬಾ ಅನಾನುಕೂಲ ಭಾವನೆ ಬರಿಸಿತು. ನಾನು ಬಾಡಿ ಸ್ಟಾಕಿಂಗ್ಸ್ ಧರಿಸಿದ್ದೆ, ಆಗ ಟಾಪ್‌ಲೆಸ್ ಆಗಬೇಕಿತ್ತು. ಆ ಪ್ರಸಂಗ ನನಗೆ ತುಂಬಾ ಭಯ ತಂದಿತು.. ನನಗೆ ನಾಚಿಕೆಯಾಯಿತು.’ ಆಗ ಶಶಿ ಕಪೂರ್‌ ‘ಸಿಮಿ, ನಾಚಿಕೆಪಡುವ ಅಗತ್ಯವಿಲ್ಲ.. ನೀನು ತುಂಬಾ ಸುಂದರವಾಗಿದ್ದೀಯ’ ಅಂತ ಹೇಳಿದರು.. ಇದರನ್ನು ಕೇಳಿ ನನಗೆ ಧೈರ್ಯ ಬಂತು.. ಉತ್ತಮವಾಗಿ ನಟಿಸಿದೆ ಅಂತ ಹೇಳಿಕೊಂಡಿದ್ದಾರೆ.

Share this content:

Leave a Reply

Your email address will not be published. Required fields are marked *