Babydoll archi viral video : ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಅರ್ಚಿತಾ ಫುಕಾನ್ ಅವರ ಫೊಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ಇವುಗಳ ಪೈಕಿ ಫುಕಾನ್ ನೀಲಿ ಚಿತ್ರತಾರೆ ಕೇಂದ್ರಾ ಜೊತೆಗಿದ್ದ ಫೋಟೋ ಸಂಚಲನ ಸೃಷ್ಟಿಸಿತ್ತು.
ಅಷ್ಟೇ ಅಲ್ಲದೆ, ವಿದೇಶಿ ಕಪ್ಪು ಮನುಷ್ಯನ ಜೊತೆ ಬೇಬಿ ಡಾಲ್ ಅರ್ಜಿ ರೂಮ್‌ನಲ್ಲಿ ಇರುವ ವಿಡಿಯೋ ಸಹ ಸದ್ದು ಮಾಡಿತ್ತು. ಇದೀಗ ಈ ಕುರಿತು ಅಚ್ಚರಿ ವಿಚಾರಗಳು ಬಯಲಾಗಿವೆ. ಅಸಲಿಗೆ ಈ ವಿಡಿಯೋ ಮತ್ತು ಫೋಟೊಗಳು ನಕಲಿ ಎಂದು ತಿಳಿದು ಬಂದಿದೆ.
ಹೌದು.. ಸೋಷಿಯಲ್ ಮೀಡಿಯಾ ಸ್ಟಾರ್ ಅರ್ಚಿತಾ ಫುಕಾನ್ (Archita Phukan) ಅವರ ಮಾಜಿ ಪ್ರೀಯತಮ ಆಕೆಯ ಮೇಲಿನ ಸೇಡು ತೀರಿಸಿಕೊಳ್ಳಲು ನಕಲಿ ಅಕೌನ್ ಕ್ರಿಯೇಟ್ ಮಾಡಿ, ಫೊಟೋಗಳನ್ನು ಮಾರ್ಫ್ ಮಾಡುವ ಮೂಲಕ ಅಂತರ್ಜಾಲದಲ್ಲಿ ಅಪ್‌ಲೋಡ್ ಮಾಡಿದ್ದ.. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ.. ಅರ್ಚಿತಾ ಸಹೋದರ ಪೊಲೀಸರಿಗೆ ದೂರು ನೀಡಿದ್ದರು.
ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿ, ಪ್ರತಿಮ್ ಬೋರಾ ಎಂಬ ವ್ಯಕ್ತಿಯನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ. ಫುಕಾನ್ (Archita Phukan video) ಸಹೋದರ ನೀಡಿದ ದೂರಿನ ಮೇರೆಗೆ ಬೋರಾನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಂದಹಾಗೆ ಅರ್ಚಿತಾ ಫುಕಾನ್ ಒರ್ವ ಸೋಷಿಯಲ್ ಮೀಡಿಯಾ ಕಂಟೈಂಟ್ ಕ್ರಿಯೇಟರ್ ಈಕೆಗೆ ಜನ ಪ್ರೀತಿಯಿಂದ ಬೇಬಿ ಡಾಲ್ ಅರ್ಚಿ ಅಂತ ಕರೆಯುತ್ತಾರೆ.
Share this content: