Bigg Boss contestants : ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟಿಯೊಬ್ಬರು ಪ್ರಸ್ತುತ ಸುದ್ದಿಯಲ್ಲಿದ್ದಾರೆ. ಗಂಡನ ನಿಧನದ ನಂತರ ಫೋಟೋಶೂಟ್ ಮಾಡಿಸುವ ಮೂಲಕ ಟ್ರೋಲ್‌ಗೆ ಗುರಿಯಾಗಿದ್ದಾರೆ. ಅಲ್ಲದೆ, ಇದರಿಂದ ಮನನೊಂದು ಸಾವಿಗೆ ಶರಣಾಗಲು ನಿರ್ಧರಿಸಿದ್ದರಂತೆ.. ಯಾರು ಆ ಹೀರೋಯಿನ್..? ಬನ್ನಿ ನೋಡೋಣ..
ಮಲಯಾಳಂ ನಟಿ ರೇಣು ಸುಧಿ ಪ್ರಸ್ತುತ ಸುದ್ದಿಯಲ್ಲಿದ್ದಾರೆ. ದಿವಂಗತ ನಟ-ಹಾಸ್ಯನಟ ಕೊಲ್ಲಂ ಸುಧಿ ಅವರ ಪತ್ನಿ ರೇಣು ಬಿಗ್‌ಬಾಸ್ ಶೋನಲ್ಲಿ ಸ್ಪರ್ಧಿಸಿದ್ದರು. ಪತಿ ಕೊಲ್ಲಂ ಸಾವಿನ ನಂತರ, ರೇಣು ಅವರ ಜೀವನವು ಅನೇಕ ಏರಿಳಿತಗಳನ್ನು ಕಂಡಿತು. ಅನೇಕ ಅಮಮಾನ, ಟ್ರೋಲ್‌ಗೆ ಒಳಗಾಗಬೇಕಾಯಿತು.
ರೇಣು ಒಬ್ಬ ಮಲಯಾಳಂ ನಟಿ, ಯೂಟ್ಯೂಬರ್ ಮತ್ತು ಕಂಟೆಂಟ್ ಕ್ರಿಯೆಟರ್. ಅವರು ಹಾಸ್ಯನಟ ಕೊಲ್ಲಂ ಸುಧಿ ಅವರ ಎರಡನೇ ಪತ್ನಿ. ಕೊಲ್ಲಂ ಅಪಘಾತದಲ್ಲಿ ಹಠಾತ್ತನೆ ನಿಧನರಾದರು. ಈ ಘಟನೆಯ ನಂತರ ರೇಣು ಮುನ್ನೆಲೆಗೆ ಬಂದರು, ವಿಧವೆಯರಿಗೆ ಸಮಾಜದಲ್ಲಿರುವ ನಿಯಮಗಳನ್ನು ಪಾಲಿಸಲು ರೇಣು ನಿರಾಕರಿಸಿ ಸುದ್ದಿಯಾದರು.
ಗಂಡನ ಸಾವಿನ ನಂತರ ಸ್ವಲ್ಪ ಸಮಯದ ನಂತರ, ರೇಣು ದಿಟ್ಟ ಫೋಟೋಶೂಟ್ ಮಾಡಿಸಿಕೊಂಡರು. ಇದರಿಂದಾಗಿ, ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಬಹಳಷ್ಟು ಟ್ರೋಲ್ ಮಾಡಲಾಯಿತು. ಇದರಿಂದ ಅಸಮಾಧಾನಗೊಂಡು ಆತ್ಮಹತ್ಯೆಗೆ ಶರಣಾಗಲು ಯೋಚನೆ ಮಾಡಿದ್ದಾಗಿ ನಟಿ ಹೇಳಿಕೊಂಡಿದ್ದಾರೆ.
ನನ್ನ ಮುಂದೆ ಈಗ ಕೇವಲ ಎರಡು ಆಯ್ಕೆಗಳಿದ್ದು, ಒಂದು ನನ್ನ ಜೀವನದ ಅಂತ್ಯ, ಇನ್ನೊಂದು ಮರುಮದುವೆಯಾಗುವುದು. ಆದರೆ, ನಾನು ಮರುಮದುವೆಯ ಬಗ್ಗೆ ಯೋಚಿಸಿಲ್ಲ. ನನ್ನ ಗಂಡನ ಮರಣದ ನಂತರ ನಾನು ಏನು ಮಾಡಿದರೂ ತಪ್ಪೇ..? ಅಂತ ಅಸಮಾಧಾನ ಹೊರಹಾಕಿದ್ದಾರೆ.
Share this content: