Kaatera world television premiere : ಥಿಯೇಟರ್‌ಗಳಲ್ಲಿ ರಿಲೀಸ್ ಆಗಿ ಬ್ಲಾಕ್ಬಸ್ಟರ್ ಹಿಟ್ ಗಳಿಸಿರುವ ಕಾಟೇರ ಸಿನಿಮಾ ಇದೀಗ ಕಿರುತೆರೆಯಲ್ಲಿ ಅಬ್ಬರಿಸಲು ರೆಡಿಯಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಈ ಸಿನಿಮಾ ತೆರೆ ಕಾಣಲಿದೆ.
ಹೌದು.. 2023ರ ಸೂಪರ್ ಹಿಟ್‌ಸಿನಿಮಾ ʼಕಾಟೇರ್ ʼ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಮಾಸ್’ ಹಿಟ್ ಸಿನಿಮಾ ಎಂದೇ ಖ್ಯಾತಿ ಪಡೆದ ಕಾಟೇರ ಭಾರತದ ನೆಲದಲ್ಲಿ ಹಾಸು ಹೊಕ್ಕಾಗಿ ಹೋಗಿದ್ದ ಜಾತಿ ಪದ್ದತಿ, ಮೇಲು ಕೀಳು ಎಂಬ ತಾರತಮ್ಯ ಮನುಷ್ಯನ್ನನ್ನು ಮನುಷ್ಯರೇ ಹೇಗೆ ನಡೆಸಿಕೊಳ್ಳುತ್ತಿದ್ದರು ಎಂದು ತೋರಿಸುವುದರ ಜೊತೆಗೆ, ಉಳುವವನೆ ಭೂಮಿಯ ಒಡೆಯ ಎಂಬ ಕಾಯ್ದೆ ಭಾರತದಲ್ಲಿ ಬಂದಾಗ, ಅಂದಿನ ಜನ ಅನುಭವಿಸಿದ ನೋವು ಯಾತನೆಗಳನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಹೆಣೆದಿರುವ ಕಾಟೇರ ಸಿನಿಮಾ, ಜನರ ಮನಸ್ಸನ ಗೆಲ್ಲುವ ಮೂಲಕ ಬಾಕ್ಸ್ ಆಫೀಸಿನಲ್ಲಿ ಸೂಪರ್ ಹಿಟ್ ಆಯಿತು.
ಈ ಸಿನಿಮಾದ ಹಾಡಿನಿಂದ ಹಿಡಿದು ಡೈಲಾಗ್ ವರೆಗೆ ಎಲ್ಲವನ್ನು ಟ್ರೆಂಡಿಂಗ್ ಮಾಡುವ ಮೂಲಕ ತಮ್ಮ ಪ್ರೀತಿಯನ್ನ ತೋರಿಸಿದ್ದು ಈಗ ಇತಿಹಾಸ, ಸಿನಿಮಾ ರಿಲೀಸ್ ಆಗಿ 4 ತಿಂಗಳು ಕಳೆದರು ಕ್ರೇಜ್ ಕಮ್ಮಿಯಾಗದ ಕಾಟೇರ ಸಿನಿಮಾವನ್ನು ಥಿಯೇಟರ್‌ನಿಂದ ಹೋಂ ಥಿಯೇಟರ್‌ಗೆ ತರುವ ಕೆಲಸವನ್ನ ಇದೇ ಎಪ್ರಿಲ್ 7 ನೇ ತಾರೀಖು ಭಾನುವಾರ ಸಂಜೆ 7.00ಕ್ಕೆ ನಿಮ್ಮ ನೆಚ್ಚಿನ ಜೀ ಕನ್ನಡ ಮಾಡುತ್ತಿದೆ.
Share this content: