Fri. Aug 8th, 2025

Sonal And Tarun Sudhir Wedding Anniversary : ಖ್ಯಾತ ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್ ಮೊದಲ ವಿವಾಹ ವಾರ್ಷಿಕೋತ್ಸ ಆಚರಿಸಲು ರೆಡಿಯಾಗಿದ್ದಾರೆ. ಈ ಪ್ರಯುಕ್ತ ಇತ್ತೀಚಿಗೆ ತರುಣ್‌ ತಮ್ಮ ಪತ್ನಿಗೆ ‘ಮಹಾನಟಿ ಸೀಸನ್ 2’ ವೇದಿಕೆಯಲ್ಲಿ ವಿಶೇಷ ಉಡುಗೊರೆ ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.

ತರುಣ್ ಸುಧೀರ್ (Tarun Sudhir) ಹಾಗೂ ಸೋನಲ್ ಮೊಂತೇರೋ ಸ್ಯಾಂಡಲ್‌ವುಡ್‌ನ ಸ್ಟಾರ್‌ ಜೋಡಿಗಳಲ್ಲಿ ಒಂದು ಪ್ರಸ್ತುತ ಈ ಜೋಡಿ ಆಗಸ್ಟ್ 11ರಂದು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಲು ರೆಡಿಯಾಗಿದ್ದಾರೆ. ಇದೇ ವೇಳೆ ನಿರ್ದೇಶಕ ಪತ್ನಿಗೆ ಸರ್ಪ್ರೈಸ್‌ ನೀಡಿದ್ದಾರೆ.

ಹೌದು.. ‘ಮಹಾನಟಿ ಸೀಸನ್ 2’ ಶೋನಲ್ಲಿ (Mahanati Season 2) ತರುಣ್‌ ಸುಧೀರ್‌ ಅವರು ಜಡ್ಜ್ ಆಗಿದ್ದಾರೆ. ಜೊತೆಗೆ ಈ ಕಾರ್ಯಕ್ರಮದಲ್ಲಿ ಖ್ಯಾತ ನಟ ರಮೇಶ್ ಅರವಿಂದ್, ಪ್ರೇಮಾ, ನಿಶ್ವಿಕಾ ನಾಯ್ಡು ಸಹ ಇದ್ದಾರೆ. ಇತ್ತೀಚಿಗೆ ತರುಣ್‌ ಸೋನಲ್‌ ಜೋಡಿ ಜೀ ಕನ್ನಡ ವಾಹಿನಿ ಮಹಾನಟಿ ವೇದಿಕೆ ಮೇಲೆ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಿತು.

ಸೋನಲ್‌ಗೆ ಹೂಗುಚ್ಛ, ಸೀರೆ ಮತ್ತಿತ್ಯಾದಿ ಉಡುಗೊರೆ ನೀಡಿದ ತರುಣ್‌, ಈ ಹೂವಿನಂತೆ ನಮ್ಮ ಜೀವನ ಸದಾ ಅರಳಲಿ.. ನನ್ನ ಕುಟುಂಬವನ್ನು ನೀನು ಕಾಪಾಡ್ತೀಯಾ ಎಂಬ ನಂಬಿಕೆ ನನಗಿದೆ.. ಹಿಂದೆ ಆಗಿರುವುದರ ಕುರಿತು ನಾನು ಯೋಚನೆ ಮಾಡುವುದಿಲ್ಲ. ಆದರೆ, ಈ ಸಮಯವನ್ನು ಖುಷಿಯಾಗಿರಿಸುತ್ತೇನೆ.. ಎಂದು ತರುಣ್ ಸೋನಲ್‌ಗೆ (sonal monteiro) ಮಾತು ಕೊಟ್ಟರು.

ಆಷ್ಟೇ ಅಲ್ಲ, ಸೋನಲ್ ಸಹ ತರುಣ್‌ಗೆ ವಿಶೇಷ ಉಡುಗೊರೆ ನೀಡಿದರು.. ಪತಿಗಾಗಿ ವಿಶೇಷ ಹಾಡನ್ನು ಹಾಡುವ ಮೂಲಕ, “ಈ ಹಾಡು ನಿಮಗಾಗಿ” ಅಂತ ವೇದಿಕೆ ಮೇಲೆ ವಿಟಿ ಪ್ಲೇ ಮಾಡಿ ಸರ್ಪ್ರೈಸ್‌ ನೀಡಿದರು. ಸಾಂಗ್‌ ಕೇಳಿ ತರುಣ್ ಸುಧೀರ್ ಭಾವುಕರಾದರು. ಪ್ರಸ್ತುತ ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Share this content:

Leave a Reply

Your email address will not be published. Required fields are marked *