Ruhani Sharma : ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ಅವರ ಸಹೋದರಿಯ ಕೆಲ ವಿಡಿಯೋಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿ ಸಂಚಲನ ಸೃಷ್ಟಿಸಿವೆ. ಅಲ್ಲದೆ, ನೆಟಿಜನ್‌ಗಳು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.. ಅಸಲಿ ವಿಚಾರವೇನು..? ಬನ್ನಿ ನೋಡೋಣ..
ಹೌದು.. ಅನುಷ್ಕಾ ಶರ್ಮಾ ಅವರ ಸಹೋದರಿ ರುಹಾನಿ ಶರ್ಮಾ, ‘ಆಗ್ರಾ’ ಚಿತ್ರದ ದೃಶ್ಯವೊಂದರ ಮೂಲಕ ಸುದ್ದಿಯಲ್ಲಿದ್ದಾರೆ. ಈ ಚಿತ್ರ ರಿಲೀಸ್ ಬೆನ್ನಲ್ಲೇ ನಟಿ ಟ್ರೇಂಡ್ ಆಗಿದ್ದರು. ಏಕೆಂದರೆ ಈ ಚಿತ್ರದಲ್ಲಿನ ಅವರ ದೃಶ್ಯವೊಂದು ಆನ್‌ಲೈನ್‌ನಲ್ಲಿ ಸೋರಿಕೆಯಾಗಿ ಸಂಚಲನ ಸೃಷ್ಟಿಸಿತ್ತು.
ಟ್ರೋಲ್‌ಗೆ ಒಳಗಾದರೂ ಸಹ ಹಿಂದೇಟು ಹಾಕದ ರುಹಾನಿ, ಪೋಸ್ಟ್ ಹಂಚಿಕೊಂಡು.. “ತಿಂಗಳ ಕಠಿಣ ಪರಿಶ್ರಮ, ತಾಳ್ಮೆಯನ್ನು ಅವಮಾನಿಸಲಾಗುತ್ತಿದೆ. ಕಲಾತ್ಮಕ ಚಿತ್ರ ಮಾಡುವುದು ಕಷ್ಟಕರವಾದ ಕೆಲಸ. ಇದಕ್ಕೆ ಬಹಳಷ್ಟು ತೊಂದರೆ, ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಬೇಕು ಎಂದು ಅಸಮಾಧಾನ ತೋಡಿಕೊಂಡಿದ್ದರು.
ಆಗ್ರಾ ಸಿನಿಮಾ ಭಾರತದಲ್ಲಿ ಬಿಡುಗಡೆ ಮಾಡಲು ಅನುಮತಿ ಪಡೆಯಲಿಲ್ಲ. ಆದ್ದರಿಂದ, ಈ ಚಿತ್ರವನ್ನು OTT ನಲ್ಲಿ ಬಿಡುಗಡೆ ಮಾಡಲಾಯಿತು. ಇದು ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ. 2023 ರಲ್ಲಿ ಆಗ್ರಾ ಸಿನಿಮಾ ಮೆಲ್ಬೋರ್ನ್‌ನ ಭಾರತೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಇಂಡೀ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ರುಹಾನಿಗೆ 30 ವರ್ಷ ವಯಸ್ಸು, ಅವರು 1994 ಸೆಪ್ಟೆಂಬರ್ 18 ರಂದು ಹಿಮಾಚಲ ಪ್ರದೇಶದಲ್ಲಿ ಜನಿಸಿದರು. ಚಂಡೀಗಢದಿಂದ ಪದವಿ ಪೂರ್ಣಗೊಳಿಸಿದ್ದಾರೆ. ರಾಹುಲ್ ರವೀಂದ್ರನ್ ನಿರ್ದೇಶನದ ತೆಲುಗು ಚಿತ್ರ ‘ಚಿ ಲಾ ಸೋ’ ಮೂಲಕ ನಟಿಯಾಗಿ ನಟನೆಗೆ ಪಾದಾರ್ಪಣೆ ಮಾಡಿದರು. ರುಹಾನಿ ಅನುಷ್ಕಾ ಶರ್ಮಾ ಅವರ ಸಹೋದರಿ ಎಂದೂ ಹೇಳಲಾಗುತ್ತದೆ.
Share this content: