Mon. Aug 11th, 2025

Anchor Rashmi Gautam : ಖ್ಯಾತ ನಿರೂಪಕಿಯೊಬ್ಬರು ಇತ್ತೀಚಿಗೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ ಆಂಕರ್‌ ತಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ತೊಂದರೆ ಅನುಭವಿಸುತ್ತಿರುವುದಾಗಿ ಹೇಳಿಕೊಂಡು ಅಚ್ಚರಿ ಮೂಡಿಸಿದ್ದಾರೆ.. ಯಾರು ಆ ನಿರೂಪಕಿ..? ಹೇಳಿದ್ದೇನು..? ಬನ್ನಿ ನೋಡೋಣ..

ರಶ್ಮಿ ಗೌತಮ್.. ತೆಲುಗು ಕಿರುತೆರೆ ನಿರೂಪಕಿಯಾಗಿ, ಹಲವಾರು ಹಾಸ್ಯ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಜಬರ್ದಸ್ತ್ ರಿಯಾಲಿಟಿ ಶೋ ಮೂಲಕ ಉತ್ತಮ ಮನ್ನಣೆಯನ್ನು ಗಳಿಸಿದರು. ಇತ್ತೀಚಿಗೆ ರಶ್ಮಿ ಹಂಚಿಕೊಂಡ ಪೋಸ್ಟ್ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.

ರಶ್ಮಿ ಗೌತಮ್ ಬಗ್ಗೆ ಎಲ್ಲರಿಗೂ ತಿಳಿದಿದೆ. ತಮ್ಮ ಮಾತಿನ ಶೈಲಿ, ಹಾಸ್ಯ ಮತ್ತು ಸೌಂದರ್ಯದ ಮೂಲಕ ಪ್ರೇಕ್ಷಕರ ಹೃದಯಗಳನ್ನು ಗೆದ್ದಿದ್ದಾರೆ. ಈಟಿವಿಯಲ್ಲಿ ಪ್ರಸಾರವಾಗುವ ಜಬರ್ದಸ್ತ್ ಹಾಸ್ಯ ಕಾರ್ಯಕ್ರಮದ ಮೂಲಕ ಪ್ರಸಿದ್ಧರಾದ ರಶ್ಮಿ ಅವರು ಹಲವಾರು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ರಶ್ಮಿ, ಆಗಾಗ ಫೋಟೋ ಶೂಟ್‌ಗಳ ಮೂಲಕ ಟ್ರೆಂಡಿಂಗ್‌ನಲ್ಲಿರುತ್ತಾರೆ. ಆದರೆ ರಶ್ಮಿ ಇತ್ತೀಚೆಗೆ ಹಂಚಿಕೊಂಡ ಪೋಸ್ಟ್ ನೋಡಿ ಎಲ್ಲರೂ ಅಚ್ಚರಿಗೊಂಡರು. ಅಲ್ಲದೆ, ತಿಂಗಳ ಕಾಲ ಸಾಮಾಜಿಕ ಮಾಧ್ಯಮದಿಂದ ದೂರವಿರಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

ನಾನು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಕೆಲವು ತೊಂದರೆಗಳನ್ನು ಎದುರಿಸುತ್ತಿದ್ದೇನೆ. ಸಾಮಾಜಿಕ ಮಾಧ್ಯಮದ ನನಗೆ ಸಾಕಷ್ಟು ಒತ್ತಡ ನೀಡುತ್ತಿದೆ. ಇಂತಹ ಸಮಯದಲ್ಲಿ ನನ್ನ ಶಕ್ತಿಯನ್ನು ಮರಳಿ ಪಡೆಯಲು ನನಗೆ “ಡಿಜಿಟಲ್ ಡಿಟಾಕ್ಸ್” ಅಗತ್ಯವಿದೆ ಎಂದು ರಶ್ಮಿ ಹೇಳಿಕೊಂಡಿದ್ದಾರೆ.

ನಾನು ಧೈರ್ಯಶಾಲಿಯಾಗಿದ್ದರೂ, ಕೆಲವು ಸಮಸ್ಯೆಗಳನ್ನು ಪರಿಹರಿಸಲು ನನಗೆ ಸಮಯ ಬೇಕಿದೆ.. ನಾನು ಮತ್ತೆ ಬಲಿಷ್ಠಳಾಗಿ ಮರಳುತ್ತೇನೆ ಎಂದು ರಶ್ಮಿ ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಅಲ್ಲದೆ, ತಮಗೆ ಬೆಂಬಲ ನೀಡುವಂತೆ ಫ್ಯಾನ್ಸ್‌ಗೆ ಮನವಿ ಮಾಡಿದ್ದಾರೆ ರಶ್ಮಿ.

ಈ ಪೋಸ್ಟ್ ನೋಡಿದ ರಶ್ಮಿಯವರ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದು, ಏನಾಯಿತು? ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ, ಇನ್ನೂ ಕೆಲವರು ಸಮಯ ತೆಗೆದುಕೊಂಡು ಸ್ಟ್ರಾಂಗ್‌ ಆಗಿ ಮತ್ತೆ ಬನ್ನಿ ಅಂತ ಸೋಷಿಯಲ್‌ ಮೀಡಿಯಾ ಫಾಲೋವರ್ಸ್‌ ಕೋರಿಕೊಳ್ಳುತ್ತಿದ್ದಾರೆ.

Share this content:

Leave a Reply

Your email address will not be published. Required fields are marked *