ರೇವ್ ಪಾರ್ಟಿ ಅಂದ್ರೆ ಆ ತರ ಪಾರ್ಟಿ ಅಂತ ಗೊತ್ತಿರದೇ ಹೋಗಿದ್ದೆ: ನಟಿ ಆಶಿ ಹೇಳಿಕೆ
Tollywood actress in Bangaluru rave party : ಬೆಂಗಳೂರು ರೇವ್ ಪಾರ್ಟಿ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಇದೇ ವೇಳೆ ಈ ಪಾರ್ಟಿಯಲ್ಲಿ ಭಾಗವಹಿಸಿದ್ದ ತೆಲುಗು ಜನಪ್ರಿಯ ನಟಿ ಆಶಿ ರಾಯ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಪಾರ್ಟಿಗೆ ನಾನೂ ಹೋಗಿದ್ದೆ ಆದರೆ ಅಲ್ಲಿ ಏನಾಗುತ್ತಿದೆ ಎಂದು ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಹೌದು.. ಕಳೆದ ಕೆಲವು ದಿನಗಳ ಹಿಂದೆ ರಾಜಧಾನಿಯ ಎಲೆಕ್ಟ್ರಾನಿಕ್ ಸಿಟಿ ಬಳಿಯ ಫಾರ್ಮ್ಹೌಸ್ನಲ್ಲಿ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಆರೋಪದ ಮೇಲೆ ಮತ್ತೊಬ್ಬ ಜನಪ್ರಿಯ ಟಾಲಿವುಡ್ ನಟ ಆಶಿ ರಾಯ್ ಅವರನ್ನು ಬೆಂಗಳೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆಶಿ ರಾಯ್ ಅವರನ್ನು ವಿಚಾರಣೆ ನಡೆಸುತ್ತಿದ್ದು, ತನಿಖೆಯ ಭಾಗವಾಗಿ ಆಕೆಯ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದು, ಫಲಿತಾಂಶ ಪಾಸಿಟಿವ್ ಬಂದಿದೆ.
ಶಾಕಿಂಗ್ ವಿಚಾರ ಅಂದ್ರೆ ಪೊಲೀಸರು ಫಾರ್ಮ್ಹೌಸ್ ಮೇಲೆ ದಾಳಿ ನಡೆಸಿದಾಗ 17 MDMA ಮಾತ್ರೆಗಳು ಮತ್ತು ಕೊಕೇನ್ ಸಿಕ್ಕಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ತೆಲುಗು ಜನಪ್ರಿಯ ನಟಿ ಹೇಮಾ ಅವರ ಬಂಧನವೂ ಸಹ ಆಗಿದೆ.ಈ ಕುರಿತು ನಟಿ ಆಶಿ ತಮ್ಮ ಯೂಟ್ಯೂಬ್ನಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿ, ರೇವ್ ಪಾರ್ಟಿಯ ಸ್ವರೂಪದ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ. ಪಾರ್ಟಿಯಲ್ಲಿ ಹಾಜರಿದ್ದರೂ ಒಳಗೆ ಏನು ನಡೆಯುತ್ತಿದೆ ಎಂದು ಗೊತ್ತಿರಲಿಲ್ಲ ಅಂತ ತಿಳಿಸಿದ್ದಾರೆ.ಅಲ್ಲದೆ ಹುಟ್ಟುಹಬ್ಬದ ಪಾರ್ಟಿ ಅಂತ ಹೋಗಿದ್ದಾಗಿ ತಿಳಿಸಿದ್ದಾರೆ.
Share this content:
Post Comment