ಮೋದಿ ಬಯೋಪಿಕ್‌ನಲ್ಲಿ ನಟಿಸಲ್ಲ, ಅವರ ಸಿದ್ಧಾಂತ ನನಗೆ ಇಷ್ಟವಿಲ್ಲ: ನಟ ಸತ್ಯರಾಜ್ ಶಾಕಿಂಗ್ ಹೇಳಿಕೆ
Sathyaraj on Modi biopic: ಪ್ರಧಾನಿ ಮೋದಿ ಬಯೋಪಿಕ್‌ನಲ್ಲಿ ನಟಿಸಲಿದ್ದೇನೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತಮಿಳು ಹಿರಿಯ ನಟ ಸತ್ಯರಾಜ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಈ ಸಂಬಂಧ ಈವರೆಗೆ ಯಾರೂ ಅವರನ್ನು ಸಂಪರ್ಕಿಸಿಲ್ಲ ಎಂದು ತಿಳಿಸಿದ್ದಾರೆ.
ಮೋದಿಯವರ ಬಯೋಪಿಕ್‌ನಲ್ಲಿ ನಟಿಸಲು ಅವಕಾಶ ಸಿಕ್ಕರೂ ಅದನ್ನು ತಿರಸ್ಕರಿಸುತ್ತೇನೆ. ನನ್ನ ಸಿದ್ಧಾಂತಗಳಿಗೆ ಸಂಪೂರ್ಣವಾಗಿ ವಿರುದ್ಧವಾದ ಚಿತ್ರದಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ಸತ್ಯರಾಜ್ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ತಮಿಳಿನಲ್ಲಿ ಮೋದಿ ಬಯೋಪಿಕ್ ಮಾಡಲು ಪ್ರಯತ್ನಗಳು ನಡೆಯುತ್ತಿದ್ದು, ಅದರಲ್ಲಿ ಸತ್ಯರಾಜ್ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸತ್ಯರಾಜ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಸುದ್ದಿ ನನಗೆ ಆಶ್ಚರ್ಯ ತಂದಿದೆ. ಇಂತಹ ಸುಳ್ಳು ಪ್ರಚಾರ ತಪ್ಪಿಸಬೇಕು. ಮುಂದೆ ಯಾರಾದರೂ ಮೋದಿ ಬಯೋಪಿಕ್‌ಗಾಗಿ ನನ್ನನ್ನು ಸಂಪರ್ಕಿಸಿದರೂ, ನಾನು ಇಲ್ಲ ಎಂದು ಹೇಳುತ್ತೇನೆ. ಏಕೆಂದರೆ ಈ ಚಿತ್ರ ನನ್ನ ಸಿದ್ಧಾಂತಗಳಿಗೆ ಸಂಪೂರ್ಣ ವಿರುದ್ಧವಾಗುವ ಸಾಧ್ಯತೆ ಇದೆ ಎಂದರು ಸತ್ಯರಾಜ್ ತಿಳಿಸಿದ್ದಾರೆ.
Share this content:
Post Comment