Loading Now

ವಿವಾಹ ವಾರ್ಷಿಕೋತ್ಸವ ದಿನವೇ ದರ್ಶನ್ ಪತ್ನಿಗೆ ಟಾಂಗ್ ಕೊಟ್ಟ ಪವಿತ್ರ ಗೌಡ..! ಡಿಬಾಸ್ ವಿಡಿಯೋ ಹಂಚಿಕೊಂಡ ನಟಿ

ವಿವಾಹ ವಾರ್ಷಿಕೋತ್ಸವ ದಿನವೇ ದರ್ಶನ್ ಪತ್ನಿಗೆ ಟಾಂಗ್ ಕೊಟ್ಟ ಪವಿತ್ರ ಗೌಡ..! ಡಿಬಾಸ್ ವಿಡಿಯೋ ಹಂಚಿಕೊಂಡ ನಟಿ

Vijayalakshmi darshan Pavithra Gowda : ವಿಜಯಲಕ್ಷ್ಮೀ ದರ್ಶನ್ ಮತ್ತು ಪವಿತ್ರ ಗೌಡ ನಡುವಿನ ವಾರ್ ನಿಲ್ಲುವಂತೆ ಕಾಣುತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ನಿಂದಿಸುವುದು, ಟಾಂಗ್ ನೀಡುವುದು ಮುಂದುವರೆದಿದೆ. ಇದೀಗ ಮತ್ತೆ ನಟ ದರ್ಶನ್ ವಿಡಿಯೋ ಹಂಚಿಕೊಳ್ಳುವ ಮೂಲಕ ಪವಿತ್ರ ಗೌಡ ಸುದ್ದಿಯಾಗಿದ್ದಾರೆ.

Screenshot_20240521_135016_Instagram-526x1024 ವಿವಾಹ ವಾರ್ಷಿಕೋತ್ಸವ ದಿನವೇ ದರ್ಶನ್ ಪತ್ನಿಗೆ ಟಾಂಗ್ ಕೊಟ್ಟ ಪವಿತ್ರ ಗೌಡ..! ಡಿಬಾಸ್ ವಿಡಿಯೋ ಹಂಚಿಕೊಂಡ ನಟಿ

ನಿನ್ನೆ ನಟ ದರ್ಶನ್ ಹಾಗೂ ವಿಜಯಲಕ್ಷ್ಮೀ ವಿವಾಹ ವಾರ್ಷಿಕೋತ್ಸವ ಇತ್ತು. ಹೀಗಾಗಿ Instagram ನಲ್ಲಿ ವಿಜಯಲಕ್ಷ್ಮಿ ಯವರು ಸ್ಟೇಟಸ್ ಹಾಕಿಕೊಂಡಿದ್ದರು. ಶೈಲಜಾ ನಾಗ್ ಅವರು ಶುಭ ಕೋರಿದ್ದ ಸ್ಟೇಟಸ್ ವಿಜಯಲಕ್ಷ್ಮಿಯವರು ಶೇರ್ ಮಾಡಿ ಧನ್ಯವಾದ ತಿಳಿಸಿದ್ದರು. ಅದಕ್ಕೆ ಟಾಂಗ್ ಕೊಡೋ ರೀತಿಯಲ್ಲಿ ದರ್ಶನ್ ವಿಡಿಯೋ ಹಾಕಿ ಕೆಳಗಡೆ ‘ಕರ್ಮ’ ಅಂತ ಶೀರ್ಷಿಕೆ ಬರೆದುಕೊಡಿದ್ದಾರೆ ಪವಿತ್ರಾ ಗೌಡ..

ವಿಡಿಯೋದಲ್ಲಿ “ಕರ್ಮ ಅನ್ನೋದು ಬ್ಯಾಗೇಜ್.. ಮಾಡಿದ್ದುಣ್ಣೋ ಮಾರಾಯ ಅಂದಂತೆ.. ಮೊದಲೆಲ್ಲಾ ಮುಂದಿನ ಜನ್ಮದಲ್ಲಿ ಅನುಭವಿಸ್ತಾರೆ ಅನ್ನಲಾಗ್ತಿತ್ತು.. ಆದ್ರೀಗ ಅಲ್ಲೇ ಡ್ರಾ ಅಲ್ಲೇ ಬಹುಮಾನ.. ಎಂದು ಸಂದರ್ಶನವೊಂದರಲ್ಲಿ DBoss ಹೇಳಿದ್ದ ಮಾತುಗಳಿವೆ.. ಸದ್ಯ ಪವಿತ್ರಾ ಗೌಡ ಸ್ಟೇಟಸ್ ಚರ್ಚೆಗೆ ಕಾರಣವಾಗಿದೆ..

Share this content:

Post Comment

You May Have Missed