Loading Now

ಕಣ್ಣಪ್ಪ’ ದಿಂದ ಹಿಡಿದು ಸೂಪರ್ ಸ್ಟಾರ್ ಮೋಹನ್‌ಲಾಲ್ ನಟನೆಯ ಮುಂಬರುವ ಬಹುನಿರೀಕ್ಷಿತ ಸಿನಿಮಾಗಳಿವು..!

ಕಣ್ಣಪ್ಪ’ ದಿಂದ ಹಿಡಿದು ಸೂಪರ್ ಸ್ಟಾರ್ ಮೋಹನ್‌ಲಾಲ್ ನಟನೆಯ ಮುಂಬರುವ ಬಹುನಿರೀಕ್ಷಿತ ಸಿನಿಮಾಗಳಿವು..!

Happy birthday Mohanlal : ಇಂದು (ಮೇ 21) ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ ಲಾಲ್ ಅವರ ಹುಟ್ಟುಹಬ್ಬ. 64 ನೇ ವರ್ಷಕ್ಕೆ (Mohanlal age) ಕಾಲಿಡುವ ಲಾಲಾಟ್ಟನ್, ತಮ್ಮ ವೃತ್ತಿಜೀವನದಲ್ಲಿ ಸುಮಾರು 360 ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಮುಂಬರುವ ವರ್ಷಗಳಲ್ಲಿ ಸೂಪರ್ ಹಿಟ್ ಪ್ರಾಜೆಕ್ಟ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮೋಹನ್ ಲಾಲ್ ಅವರ ಹುಟ್ಟುಹಬ್ಬದಂದು ನಟನ ಮುಂಬರುವ ಬಹುನಿರೀಕ್ಷಿತ ಚಲನಚಿತ್ರಗಳು ಯಾವುವು ಅಂತ ನೋಡೋಣ.

ಎಂಪುರಾನ್ : ಮೋಹನ್ ಲಾಲ್ ನಟನೆಯ ಮುಂಬರುವ ಸಿನಿಮಾ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಸೂಪರ್ ಹಿಟ್ ಚಿತ್ರ ‘ಲೂಸಿಫರ್’ನ ಸೀಕ್ವೆಲ್ ಇದಾಗಿದೆ. ‘ಲೂಸಿಫರ್’ ನಲ್ಲಿ ಮೋಹನ್ ಲಾಲ್ ಸ್ಟೀಫನ್ ನೆಡುಂಪಲ್ಲಿ ಅಕಾ ಖುರೇಷಿ ಅಬ್‌ರಾಮ್ ಪಾತ್ರವನ್ನು ನಿರ್ವಹಿಸಿದ್ದಾರೆ. ಮೋಹನ್‌ಲಾಲ್ ಅವರು ‘ಎಂಪುರಾನ್’ ಚಿತ್ರದಲ್ಲಿ ತಮ್ಮ ಪಾತ್ರವನ್ನು ಪುನರಾವರ್ತಿಸಲಿದ್ದಾರೆ. ಅದರ ಚಿತ್ರೀಕರಣವು ಪ್ರಸ್ತುತ ತಿರುವನಂತಪುರದಲ್ಲಿ ನಡೆಯುತ್ತಿದೆ.

ಬರೋಜ್: ಈ ಚಿತ್ರದ ಮೂಲಕ ಮೋಹನ್‌ಲಾಲ್, ಸೆಪ್ಟೆಂಬರ್ 12 ರಂದು ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಓಣಂಗೆ ಬಿಡುಗಡೆಯಾಗುವ ನಿರೀಕ್ಷಿತ ಸಿನಿಮಾಗಳಲ್ಲಿ ಇದು ಒಂದು.

ಕಣ್ಣಪ್ಪ: ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಮತ್ತು ಮಂಚು ವಿಷ್ಣು ನಟನೆಯ ಬಿಗ್ ಬಜೆಟ್ ಸಿನಿಮಾ.ಪ್ರಭಾಸ್ ಮತ್ತು ಮೋಹನ್ ಲಾಲ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಎಪಿಕ್ ಆಕ್ಷನ್ ಎಂಟರ್‌ಟೈನರ್, ಕನೆಕ್ಟ್ ಮೀಡಿಯಾ ಮತ್ತು ಎವಿಎಸ್ ಸ್ಟುಡಿಯೋಸ್ ಜೊತೆಗೆ ಏಕ್ತಾ ಆರ್ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ.

ಮೋಹನ್ ಲಾಲ್ 360: ತರುಣ್ ಮೂರ್ತಿ ನಿರ್ದೇಶನದ ಈ ಚಿತ್ರದ ಮೂಲಕ ಮೋಹನ್ ಲಾಲ್ ಬಹಳ ಸಮಯದ ನಂತರ ನೃತ್ಯಗಾರ್ತಿ-ನಟಿ ಶೋಬನಾ ಅವರೊಂದಿಗೆ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಇನ್ನೂ ಶೀರ್ಷಿಕೆ ಸಿಕ್ಕಿಲ್ಲ.

Share this content:

Post Comment

You May Have Missed