ತೆಳು ಬಿಳಿ ಸೀರೆಯಲ್ಲಿ ಗಂಧರ್ವ ಕನ್ಯೆ ಜಾನ್ವಿ…! ಫೋಟೋಸ್ ಇಲ್ಲಿವೆ
Janhvi Kapoor in white saree : ಬಿಟೌನ್ ಸುಂದರಿ ಜಾನ್ವಿ ಕಪೂರ್ ಹಾಟ್ ಫೋಟೋ ಶೂಟ್ ಮಾಡಿಸಿದಾಗಲೆಲ್ಲ ಸುದ್ದಿಯಲ್ಲಿರುತ್ತಾರೆ. ಸದ್ಯ ಬಿಳಿ ಸೀರೆಯಲ್ಲಿ ಮಿಂಚಿರುವ ನಟಿಯ ಮನಮೋಹಕ ಸೌಂದರ್ಯ ಪಡ್ಡೆ ಹುಡುಗರ ಮನ ಗೆಲ್ಲುತ್ತಿದೆ..
ಜಾನ್ವಿ ಕಪೂರ್ ಅತಿಲೋಕಸುಂದರಿ ಶ್ರೀದೇವಿಯವರ ಪುತ್ರಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ವಿಶೇಷ ಮನ್ನಣೆ ಗಳಿಸಿದ್ದರು.
ಜಾನ್ವಿ ಇಂಡಸ್ಟ್ರಿಗೆ ಬಂದು ಆರು ವರ್ಷ ಕಳೆದರೂ ಆಷ್ಟಾಗಿ ಬಿಗ್ ಹಿಟ್ ಸಿನಿಮಾ ನೀಡಿಲ್ಲ.
ಧಡಕ್’ ಚಿತ್ರದ ಮೂಲಕ ಹಿಂದಿಗೆ ಪಾದಾರ್ಪಣೆ ಮಾಡಿದ ಜಾಹ್ನವಿ ಕಪೂರ್ ನಂತರ ‘ಗುಂಜನ್ ಸಕ್ಸೇನಾ’ ಚಿತ್ರದಲ್ಲಿ ಮೊದಲ ಮಹಿಳಾ ಹೋರಾಟಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರ OTT ವೇದಿಕೆಯಲ್ಲಿ ಸೂಪರ್ ಹಿಟ್ ಆಯಿತು.
ಸದ್ಯ Jr NTR ಅವರ ‘ದೇವರ’ ಚಿತ್ರದ ಮೂಲಕ ಜಾನ್ವಿ ದಕ್ಷಿಣ ಚಿತ್ರರಂಗಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಈ ಚಿತ್ರ ಇದೇ ವರ್ಷ ಅಕ್ಟೋಬರ್ 10 ರಂದು ಬಿಡುಗಡೆಯಾಗಲಿದೆ.
ಎನ್‌ಟಿಆರ್ ಚಿತ್ರದ ನಂತರ ರಾಮ್ ಚರಣ್ ಮತ್ತು ಬುಚ್ಚಿ ಬಾಬು ಸನಾ ಕಾಂಬಿನೇಷನ್ ನ ಚಿತ್ರದಲ್ಲಿ ಜಾನ್ವಿ ನಟಿಸುತ್ತಿದ್ದಾರೆ. ಎನ್ ಟಿಆರ್ ಮತ್ತು ರಾಮ್ ಚರಣ್ ರಂತಹ ಯಂಗ್ ಹೀರೋಗಳಿಗೆ ಜೋಡಿಯಾಗುವ ಮೂಲಕ ದಕ್ಷಿಣ ಚಿತ್ರರಂಗದತ್ತ ಸಂಪೂರ್ಣ ಗಮನ ಹರಿಸಿದ್ದಾಳೆ ಈ ಬಿಟೌನ್ ಸುಂದರಿ.
Share this content:
Post Comment