ಗಂಡು ಮಗುವಿಗೆ ಜನ್ಮ ನೀಡಿದ ಯಾಮಿ ಗೌತಮ್..! ಮಗುವಿಗೆ ಅಪರೂಪದ ಹೆಸರಿಟ್ಟ ನಟಿ
Yami Gautam : ಉಲ್ಲಾಸ ಉತ್ಸಾಹ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ಗೆ ಎಂಟ್ರಿ ಕೊಟ್ಟು ಜನಪ್ರಿಯತೆ ಗಳಿಸಿದ್ದ ನಟಿ ಯಾಮಿ ಗೌತಮ್ ಮುಂಬೈನ ಸೂರ್ಯ ಹಾಸ್ಪಿಟಲ್ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಲ್ಲದೆ ಮಗುವಿನ ಹೆಸರನ್ನು (Yami Gautam baby name) ಸಹ ರಿವೀಲ್ ಮಾಡಿದ್ದಾರೆ.
2021ರ ಜೂನ್ 4ರಂದು ನಟಿ ಯಾಮಿ ಗೌತಮ್ ಅವರು ಬಾಲಿವುಡ್ ಖ್ಯಾತ ಬರಹಗಾರ, ನಿರ್ದೇಶಕ ಆದಿತ್ಯ ಧಾರ್ (Aditya Dhar) ಅವರ ಕೈ ಹಿಡಿದರು. ಇದೀಗ ಈ ದಂಪತಿಗೆ ಗಂಡು ಮಗು ಜನಿಸಿದೆ. ಈ ಕುರಿತ ಮಾಹಿತಿ ಹಂಚಿಕೊಂಡಿರುವ ನಟಿ, ಗಂಡು ಮಗು ಜನಿಸಿದ್ದು , ವೇದವಿದ್ ಎಂದು ಮಗುವಿಗೆ ನಾಮಕರಣ ಮಾಡಿರುವುದಾಗಿ ತಿಳಿಸಿದ್ಧಾರೆ. ವೇದವಿದ್ ಎಂದರೆ ಶಿವ ಪುರಾಣದ ಪ್ರಕಾರ ವೇದಗಳ ಬಗ್ಗೆ ಜ್ಞಾನವುಳ್ಳ ವ್ಯಕ್ತಿ ಎಂದರ್ಥ.
ಸದ್ಯ ಯಾಮಿಗೆ ಅವರ ಅಭಿಮಾನಿಗಳು ಸೇರಿದಂತೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ನಟಿಗೆ ಅಭಿನಂದನೆ ತಿಳಿಸಿದ್ದಾರೆ. ಅಲ್ಲದೆ ಆದಷ್ಟು ಬೇಗ ಮಗುವಿನ ಫೋಟೋ ರಿವೀಲ್ ಮಾಡಿ ಅಂತ ಯಾಮಿ ಫ್ಯಾನ್ಸ್ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದಿತ್ಯ ಧಾರ್ ನಿರ್ದೇಶಣದ ‘ಉರಿ’ ಸಿನಿಮಾದಲ್ಲಿ ಯಾಮಿ ನಟಿಸಿದ್ದರು. ಈ ಸಿನಿಮಾದ ಉತ್ತಮ ಪ್ರದರ್ಶನ ಕಂಡಿತ್ತು.. ಇತ್ತೀಚಿಗೆ ನಟಿ ಆರ್ಟಿಕಲ್ 370 ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದರು.
Share this content:
Post Comment