Loading Now

ಯಾರಾಗ್ತಾರೆ ಗೊತ್ತೆ Pushpa 2 ಐಟಂ ಗರ್ಲ್..? ಮೊದಲು ಸಮಂತಾ.. ಇದೀಗ ಈ ಹಾಟ್ ಬ್ಯೂಟಿ..

ಯಾರಾಗ್ತಾರೆ ಗೊತ್ತೆ Pushpa 2 ಐಟಂ ಗರ್ಲ್..? ಮೊದಲು ಸಮಂತಾ.. ಇದೀಗ ಈ ಹಾಟ್ ಬ್ಯೂಟಿ..

Pushpa 2 song: ಸುಕುಮಾರ್ ನಿರ್ದೇಶನದ ಪುಷ್ಪಾ ಸಿನಿಮಾದಲ್ಲಿ ದೇವಿ ಶ್ರೀ ಪ್ರಸಾದ್ ಸಂಯೋಜಿಸಿದ ಊ ಅಂತೀಯಾ.. ಮಾವ .. ಸಾಂಗ್ ಸಖತ್ ಹಿಟ್ ಆಗಿತ್ತು.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ ಇದೀಗ ಎರಡನೇ ಭಾಗದಲ್ಲಿ ಸಮಂತಾ ಬದಲು ಯಾರ್ ಐಟಂ ಗರ್ಲ್ ಆಗಿ ಕಾಣಿಸಿಕೊಳ್ಳಲ್ಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಮುಂಬರುವ ಬಹುನಿರೀಕ್ಷಿತ ಪುಷ್ಪಾ 2 ಚಿತ್ರದ ಥಂಪಿಂಗ್ ಮತ್ತು ಸಿಜ್ಲಿಂಗ್ ಡ್ಯಾನ್ಸ್‌ನಲ್ಲಿ ಕಾಣಿಸಿಕೊಳ್ಳಲಿರುವ’ಐಟಂ ಗರ್ಲ್’ ಬಗ್ಗೆ ಈಗಾಗಲೇ ಮುಗಿಯದ ಚರ್ಚೆಯಾಗಿದೆ. ಮೊದಲ ಭಾಗದಲ್ಲಿ ಸಮಂತಾ ರುತ್ ಪ್ರಭು ಅವರು ತಮ್ಮ ನೃತ್ಯದ ಮೂಲಕ ಮೋಡಿ ಮಾಡಿದ್ದರು. ಎರಡನೆಯ ಭಾಗದಲ್ಲಿ ಅವರಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಈ ನಿಟ್ಟಿನಲ್ಲಿ, ನಿರ್ದೇಶಕ ಸುಕುಮಾರ್ ಮತ್ತೆ ದಿಶಾ ಪಟಾನಿ ಅವರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತದೆ, ಆದರೆ ಅವರು ಹೆಚ್ಚಿನ ಸಂಭಾವನೆಯನ್ನು ಕೇಳುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, ಪ್ಯಾನ್-ಇಂಡಿಯಾ ಚಲನಚಿತ್ರವಾದ ಕಲ್ಕಿ 2898 AD ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿರುವುದರಿಂದ ಅವರು ಈ ಹಾಡನ್ನು ಮಾಡಲು ಸಿದ್ಧರಿಲ್ಲ ಎಂದು ತಿಳಿದು ಬಂದಿದೆ.

ಸಧ್ಯ ಸುಕುಮಾರ್ ಜಾನ್ವಿ ಕಪೂರ್ ಅವರನ್ನು ಕರೆ ತರುತ್ತಾರೆ ಎಂಬ ಸುದ್ದಿಯೂ ಇದೆ. ತಮನ್ನಾ ಕೂಡ ಈ ಲಿಸ್ಟ್ ನಲ್ಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಹೇಗಿದ್ದರೂ ಐಟಂ ಗರ್ಲ್ ಗೊಂದಲಕ್ಕೆ ತೆರೆ ಬೀಳಲಿದೆಯಂತೆ.

Share this content:

Post Comment

You May Have Missed