ಪ್ರಧಾನ ಮಂತ್ರಿ ನಮೋ ಸೀಟ್‌ನಲ್ಲಿ ಕುರಲಿದ್ದಾರೆ ಕಟ್ಟಪ್ಪ ಖ್ಯಾತಿಯ ನಟ ಸತ್ಯರಾಜ್..!
Actor Sathyaraj as PM Narendra modi : ದೇಶದ ಹಾಲಿ ಪ್ರಧಾನಿ ನರೇಂದ್ರ ಮೋದಿ ಜೀವನ ಕಥೆ ತೆರೆ ಮೇಲೆ ಬರಲು ರೆಡಿಯಾಗುತ್ತಿದೆ.. ಈ ಬಯೋಪಿಕ್ ಬಗ್ಗೆ ಹಲವು ದಿನಗಳಿಂದ ಸುದ್ದಿ ಬರುತ್ತಿದೆ. ಆದರೆ ಯಾರು ನಮೋ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದಿಲ್ಲ. ಇದೀಗ ಈ ಕುರಿತು ಬಿಗ್‌ಅಪ್‌ಡೇಟ್ ಹೊರ ಬಿದ್ದಿದೆ..
ಮೋದಿ ಪಾತ್ರದಲ್ಲಿ ಬಾಹುಬಲಿ ʼಕಟ್ಟಪ್ಪ’ ಖ್ಯಾತಿಯ ಸತ್ಯರಾಜ್ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಮೋದಿ ಮತ್ತು ಸತ್ಯತಾಜ್ ನೋಡಲು ಒಂದೇ ರೀತಿ ಕಾಣಿಸುವ ಹಿನ್ನೆಲೆ ನಮೋ ಪಾತ್ರಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ, ಈ ಸಿನಿಮಾದ ಟೈಟಲ್ ಕೂಡ ಫಿಕ್ಸ್ ಮಾಡಲಾಗಿದೆ.
ನಮೋ ಬಯೋಪಿಕ್‌ಗೆ ʼವಿಶ್ವನೇತಾʼ ಎಂಬ ಹೆಸರನ್ನು ಅಂತಿಮಗೊಳಿಸಲಾಗಿದೆಯಂತೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಹೊರಬರಬೇಕಿದೆ.. ಸಿಎಚ್ ಕ್ರಾಂತಿ ಕುಮಾರ್ ನಿರ್ದೇಶನದ ಈ ಸಿನಿಮಾವನ್ನು, ವಂದೇ ಮೀಡಿಯಾ ಪ್ರೈ. ಲಿ ಬ್ಯಾನರ್ ಅಡಿಯಲ್ಲಿ ಕಾಶಿರೆಡ್ಡಿ ಶರತ್ ರೆಡ್ಡಿ ನಿರ್ಮಾಣ ಮಾಡಲಿದ್ದಾರೆ..
Share this content:
Post Comment