Loading Now

ಅವಕಾಶ ಬೇಕು ಅಂದ್ರೆ ನಿರ್ದೇಶಕರ ಜತೆ..! ನೇಹಾ ಶೆಟ್ಟಿ ಹೇಳಿಕೆ ವೈರಲ್‌

ಅವಕಾಶ ಬೇಕು ಅಂದ್ರೆ ನಿರ್ದೇಶಕರ ಜತೆ..! ನೇಹಾ ಶೆಟ್ಟಿ ಹೇಳಿಕೆ ವೈರಲ್‌

Neha Shetty : ಸ್ಯಾಂಡಲ್‌ವುಡ್‌ ಮುಂಗಾರು ಮಳೆ 2 ಸಿನಿಮಾದ ಮೂಲಕ ಸಿನಿ ಲೋಕಕ್ಕೆ ಕಾಲಿಟ್ಟ ನೇಹಾ ಶೆಟ್ಟಿ ಇದೀಗ ಟಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಡಿಜೆ ಟಿಲ್ಲು ಸಿನಿಮಾದ ನಂತರ ನಟಿಗೆ ಸಾಲು ಸಾಲು ಆಫರ್‌ಗಳು ಬರುತ್ತಿವೆ. ಇದರ ನಡುವೆ ನೇಹಾ ನೀಡಿರುವ ಹೇಳಿಕೆಯೊಂದು ಸಂಚಲನ ಮೂಡಿಸಿದೆ.

ನೇಹಾ ಶೆಟ್ಟಿಗೆ ಡಿಜೆ ಟಿಲ್ಲು ಚಿತ್ರದಿಂದ ಒಳ್ಳೆಯ ಕ್ರೇಜ್‌ ಸಿಕ್ಕಿತು. ಈ ಸಿನಿಮಾದಲ್ಲಿ ಗ್ಲಾಮರ್ ಅಷ್ಟೇ ಅಲ್ಲ, ರೊಮ್ಯಾನ್ಸ್ ಮೂಲಕ ಯುವಜನತೆಗೆ ಸುಂದರಿ ನೇಹಾ ಹತ್ತಿರವಾದರು. ಸದ್ಯ ನೇಹಾ ಶೆಟ್ಟಿ ಅವರ ಡೇಟ್ಸ್‌ಗಾಗಿ ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದಾರೆ.. ಇತ್ತೀಚೆಗೆ ನೇಹಾ ಟಿಲ್ಲು ಸ್ಕ್ವೇರ್‌ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ನೇಹಾ ಶೆಟ್ಟಿ ಟಾಲಿವುಡ್‌ನಲ್ಲಿ ಅವಕಾಶಗಳ ಬಗ್ಗೆ ಇಂಟ್ರಸ್ಟಿಂಗ್‌ ಹೇಳಿಕೆ ನೀಡಿದ್ದಾರೆ. ಕೆಲವೊಮ್ಮೆ ಅವಕಾಶಗಳು ನಾಯಕಿಯರನ್ನು ಹುಡುಕಿಕೊಂಡು ಬರುತ್ತವೆ. ಆದರೆ ಪ್ರತಿ ಬಾರಿ ಹೀಗಾಗುವುದಿಲ್ಲ, ಆಫರ್‌ಗಳಿಗಾಗಿ ನಾವು ನಿರ್ದೇಶಕರ ಜೊತೆ ಸಂಪರ್ಕದಲ್ಲಿ ಇರಬೇಕು ಅಂತ ನೇಹಾ ಶೆಟ್ಟಿ ಹೇಳಿದ್ದಾರೆ.

ಅವಕಾಶಗಳಿಗಾಗಿ ನಾವು ಸದಾ ನಿರ್ದೇಶಕರ ಜತೆ ಸಂಪರ್ಕದಲ್ಲಿರಬೇಕು. ಅವರಿಗೆ ಕರೆ ಮಾಡಿ ಅವಕಾಶ ಕೇಳುತ್ತೇನೆ. ಅದರಲ್ಲಿ ತಪ್ಪೇನಿಲ್ಲ. ಎಕೆಂದರೆ ಚಿತ್ರದಲ್ಲಿ ನಟಿಸಲು ನಮಗೆ ಎಷ್ಟು ಆಸಕ್ತಿ ಇದೆ ಎಂದು ಅವರಿಗೆ ತಿಳಿಯಬೇಕಾದರೆ ನಾವೇ ಕೇಳಬೇಕು. ನಾನು ನಿರ್ದೇಶಕರಿಗೆ ಫೋನ್ ಮಾಡಿ.. ಸಾರ್ ನೀವು ಸಿನಿಮಾ ಮಾಡುತ್ತಿದ್ದೀರಿ ಅಂತ ಕೇಳಿ ಬಂತು. ನಿಮ್ಮ ಕಥೆಗೆ ನಾನು ನ್ಯಾಯ ಒದಗಿಸುತ್ತೇನೆ ಅಂತ ನಿಮಗೆ ಅನಿಸಿದರೆ, ದಯವಿಟ್ಟು ನನಗೆ ಒಂದು ಅವಕಾಶ ನೀಡಿ ಅಂತ ಕೇಳುವುದರಲ್ಲಿ ತಪ್ಪೇನಿಲ್ಲ ಎಂದು ನೇಹಾ ಶೆಟ್ಟಿ ಹೇಳಿದ್ದಾರೆ. ನಟಿ ಈ ಮಾತುಗಳು ಅವರ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿವೆ..

Share this content:

Post Comment

You May Have Missed