ಮದುವೆಗೆ ರೆಡಿಯಾದ ನಟ ಪ್ರಭಾಸ್..! ಪೋಸ್ಟ್ ವೈರಲ್, ಅನುಷ್ಕಾ ಕೈ ಹಿಡಿತಾರಾ ರೆಬಲ್..?
Prabhas Marriage : ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ನಟ ಪ್ರಭಾಸ್ (Prabhas) ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಪೋಸ್ಟ್ ಒಂದು ಸಂಚಲನ ಸೃಷ್ಟಿಸುತ್ತಿದೆ. ತಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿಯ ಆಗಮನ ಅಂತ ಹೇಳಿಕೊಂಡಿರುವ ನಟ ಮಾತುಗಳು ವ್ಯಾಪಕ ಚರ್ಚೆಗೆ ಕಾರಣವಾಗುತ್ತಿವೆ.. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ..
ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಪೋಸ್ಟ್ ( Prabhas Instagram post) ತಮ್ಮ ಇನ್‌ಸ್ಟಾಗ್ರಮ್ ಖಾತೆಯಲ್ಲಿ ಸ್ಟೇಟಸ್ ಹಾಕಿದ್ದಾರೆ. ಅದರಲ್ಲಿ, ‘ಡಾರ್ಲಿಂಗ್ಸ್.. ಕೊನೆಗೂ ನಮ್ಮ ಜೀವನದಲ್ಲಿ ಒಬ್ಬ ವಿಶೇಷ ವ್ಯಕ್ತಿ ಬರುತ್ತಿದ್ದಾನೆ. ಕಾಯಿರಿ’ ಅಂತ ಬರೆದುಕೊಂಡಿದ್ದಾರೆ. ಈ ಮೂಲಕ ನಟ ಕೊನೆಗೂ ತಮ್ಮ ಮದುವೆಯ ಬಗ್ಗೆ ಸಿಹಿ ಸುದ್ದಿ ನೀಡ್ತಾರಾ ಎನ್ನುವ ಅನುಮಾನ ಹುಟ್ಟುಹಾಕಿದೆ.
ಅಲ್ಲದೆ ಡಾರ್ಲಿಂಗ್ ಪೋಸ್ಟ್ ನೋಡಿದ ಅವರ ಅಭಿಮಾನಿಗಳು, ಪ್ರಭಾಸ್ ಶೀಘ್ರವೇ ಸಿಹಿ ಸುದ್ದಿ ನೀಡ್ತಾರೆ, ಮದುಯಾಗಲಿರುವ ಯುವತಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ ಅಂತ ಕಾತುರರಾಗಿದ್ದಾರೆ. ಇನ್ನೂ ಕೆಲ ನೆಟ್ಟಿಗರು, ಇದು ಕಲ್ಕಿ ಚಿತ್ರದ ಪಬ್ಲಿಸಿಟಿ ಸ್ಟಂಟ್. ಸದ್ಯದಲ್ಲೇ ಕಲ್ಕಿ ಚಿತ್ರದ (Kalki 2898 AD) ಅದ್ಧೂರಿ ಪ್ರೀ ರಿಲೀಸ್ ಸಮಾರಂಭ ನಡೆಯಲಿದೆ. ಇದನ್ನು ತಿಳಿಸಲು ಪ್ರಭಾಸ್ ಈ ಪೋಸ್ಟ್ ಮಾಡಿದ್ದಾರೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ಅದೇನೇ ಇರಲಿ, ಸದ್ಯದಲ್ಲೇ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.
ಇನ್ನು ಕಳೆದ ಕೆಲವು ವರ್ಷಗಳಿಂದ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆಯಾಗ್ತಾರೆ (Anushka Shetty) ಎನ್ನುವ ಸುದ್ದಿ ಹರಿದಾಡುತ್ತಿತ್ತು. ಅಲ್ಲದೆ, ಶೀಘ್ರವೇ ಈ ಕುರಿತು ಸಿಹಿ ಸುದ್ದಿ ನೀಡ್ತಾರೆ ಅಂತ ಹೇಳಲಾಗುತ್ತಿತ್ತು. ಇದೀಗ ಡಾರ್ಲಿಂಗ್ ಪೋಸ್ಟ್ ನೋಡಿದ್ರೆ ಈ ಬಗ್ಗೆ ಏನಾದರೂ ಮಾಹಿತಿ ನೀಡ್ತಾರಾ ಅಂತ ಕುತೂಹಲ ಮೂಡಿಸಿದೆ.
Share this content:
Post Comment