Loading Now

ಇವರೇ ನೋಡಿ ಮೃಣಾಲ್ ಠಾಕೂರ್ ಬಾಯ್ ಫ್ರೆಂಡ್..! ಯಾರ್ ಗೊತ್ತೆ ಈ ಸುರಸುಂದರ

ಇವರೇ ನೋಡಿ ಮೃಣಾಲ್ ಠಾಕೂರ್ ಬಾಯ್ ಫ್ರೆಂಡ್..! ಯಾರ್ ಗೊತ್ತೆ ಈ ಸುರಸುಂದರ

Mrunal Thakur boyfriend: ಬಾಲಿವುಡ್‌ ಬೆಡಗಿ ಮೃನಾಲ್ ಠಾಕೂರ್ ಅತೀ ಕಡಿಮೆ ಸಮಯದಲ್ಲಿ ಸೌತ್ ಸಿನಿರಂಗದಲ್ಲಿ ಸ್ಟಾರ್ ಗಿರಿ ಪಡೆದ ನಟಿ. ತಮ್ಮ ಸೌಂದರ್ಯ ಹಾಗು ನಟನೆಯಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾಳೆ. ಹನು ರಾಘವಪುಡಿ ನಿರ್ದೇಶನದ “ಸೀತಾ ರಾಮಂ” ಈ ಕ್ಯೂಟ್ ಹುಡುಗಿಯನ್ನು ದಕ್ಷಿಣ ಸಿನಿಮಾ ರಂಗದ ಪ್ರೇಕ್ಷಕರಿಗೆ ಪರಿಚಯಿಸಿತು.

ಮೃಣಾಲ್ ಸೀತಾ ಮಹಾಲಕ್ಷ್ಮಿ ಪಾತ್ರವನ್ನು ಬಹಳ ಅದ್ಭುತವಾಗಿ ನಿರ್ವಹಿಸಿದರು. ಇದು ಬೆಡಗಿಗೆ ಉತ್ತಮ ಯಶಸ್ಸು ತಂದುಕೊಟ್ಟಿತು. ನಂತರ ತೆಲುಗಿನಲ್ಲಿ ಈ ಸುಂದರಿ ಕ್ರೇಜ್ ಹೆಚ್ಚಾಯಿತು. ನ್ಯಾಚುರಲ್ ಸ್ಟಾರ್ ನಾನಿ ಜೊತೆ ಹಾಯ್ ನನ್ನಾ ಸಿನಿಮಾದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಇನ್ನೂ ಹತ್ತಿರವಾದರು. ಕೊನೆಯದಾಗಿ ಫ್ಯಾಮಿಲಿ ಸ್ಟಾರ್ ಜೊತೆ ತೆರೆ ಮೇಲೆ ಕಾಣಿಸಿಕೊಂಡರು. ಆದರೆ ನಟ ವಿಜಯ್ ದೇವರಕೊಂಡ ನಟನೆಯ ಫ್ಯಾಮಿಲಿ ಸ್ಟಾರ್ ನಿರೀಕ್ಷೆಯಂತೆ ಹೆಚ್ಚು ಪ್ರಭಾವ ಬೀರಲಿಲ್ಲ.

ಈ ಮಧ್ಯೆ, ಮೃಣಾಲ್ ಒಬ್ಬ ಹುಡುಗನೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಎಂಬ ಮಾತು ಬಾಲಿವುಡ್‌ನಲ್ಲಿ ಕೇಳಿಬರುತ್ತಿದೆ. ಇವರೇ ಮೃಣಾಲ್ ಬಾಯ್ ಫ್ರೆಂಡ್ ಎಂಬ ಗುಸುಗುಸು ಕೇಳಿಬರುತ್ತಿದೆ. ಅವರು ಯಾರು ಅಲ್ಲ ಬಾಲಿವುಡ್‌ನ ಯುವ ನಾಯಕ ಸಿದ್ಧಾಂತ್ ಚತುರ್ವೇದಿ. ಮೃಣಾಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ ಆದರೆ ಇದು ಅಧಿಕೃತವಲ್ಲ.

ಇತ್ತೀಚಿಗೆ ಇವರಿಬ್ಬರು ಹೋಟೆಲ್‌ನಿಂದ ಹೊರಬರುತ್ತಿರುವಾಗ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು ಈ ಕುರಿತ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ..

Share this content:

Post Comment

You May Have Missed