Loading Now

ಶಿಲ್ಪಾ ಶೆಟ್ಟಿ ತಂಗಿ ಆಸ್ಪತ್ರೆಗೆ ದಾಖಲು..! ಮಹಿಳೆಯರಿಗೆ ವಿಶೇಷ ಮನವಿ ಮಾಡಿದ ಶಮಿತಾ ಶೆಟ್ಟಿ

ಶಿಲ್ಪಾ ಶೆಟ್ಟಿ ತಂಗಿ ಆಸ್ಪತ್ರೆಗೆ ದಾಖಲು..! ಮಹಿಳೆಯರಿಗೆ ವಿಶೇಷ ಮನವಿ ಮಾಡಿದ ಶಮಿತಾ ಶೆಟ್ಟಿ

Shamita Shetty hospitalized:ಕರಾವಳಿ ಸುಂದರಿ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಅನಾರೋಗ್ಯದಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಶಮಿತಾ ಶೆಟ್ಟಿ ಆಸ್ಪತ್ರೆಯ ಬೆಡ್ ಮೇಲೆ ಕುಳಿತು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ವಿಶೇಷ ಅಂದ್ರೆ ಈ ವಿಡಿಯೋವನ್ನು ಶಿಲ್ಪಾ ರೆಕಾರ್ಡ್ ಮಾಡಿದ್ದಾರೆ. ಶಮಿತಾ ಎಂಡೋಮೆಟ್ರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದಾರೆ.

ಎಲ್ಲ ಮಹಿಳೆಯರು ದಯವಿಟ್ಟು ಎಂಡೋಮೆಟ್ರಿಯಾಸಿಸ್ ಎಂದರೇನು ಅಂತ ತಿಳಿದುಕೊಳ್ಳಿ, ಶೇ 40 ಮಹಿಳೆಯರಿಗೆ ಈ ಸಮಸ್ಯೆ ಇರುತ್ತದೆ. ಇದು ತೀವ್ರ ನೋವು ಉಂಟು ಮಾಡುವ ಖಾಯಿಲೆ.. ಸಾಧ್ಯವಾದಷ್ಟು ಇದರ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದಿದ್ದಾರೆ ನಟಿ..

‘ಮೊಹಬತ್ತೇನ್’ ಸಿನಿಮಾ ಮೂಲಕ ಶಮಿತಾ ಶೆಟ್ಟಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. 2008ರ ನಂತರ ಚಿತ್ರರಂಗದಿಂದ ದೂರವಾಗಿದ್ದ ನಟಿ ಬಿಗ್​ಬಾಸ್, ಝಲಕ್ ದಿಕ್​ಲಾಜಾ, ಸೇರಿದಂತೆ ಕೆಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದ್ದರು. 2023 ರಲ್ಲಿ ‘ದಿ ಕೆನೆಂಟ್’ ಸಿನಿಮಾದ ಮೂಲಕ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡರು. ಸದ್ಯ ಕೆಲವು ವೆಬ್ ಸೀರಿಸ್ ನಲ್ಲಿ ನಿರತರಾಗಿದ್ದಾರೆ.

Share this content:

Post Comment

You May Have Missed