ಮಗಳು ಅಂತ ಕರೆದವಳನ್ನೇ ಮದುವೆಯಾಗಿ 2 ಮಕ್ಕಳಿಗೆ ಜನ್ಮ ನೀಡಿದ ಸ್ಟಾರ್ ನಟ..!
Saif Ali Khan Kareena Kapoor : ಬಾಲಿವುಡ್ ಸ್ಟಾರ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಜನಪ್ರಿಯ ಜೋಡಿಗಳಲ್ಲಿ ಒಂದು. ಈ ಜೋಡಿ ಸ್ಕ್ರೀನ್ ಮೇಲೆ ಕಾಣಿಸಿಕೊಂಡರೆ ಸಾಕು ಇಬ್ಬರು ಅಭಿಮಾನಿಗಳಿಗೆ ಅಂದು ಹಬ್ಬವೇ ಸರಿ. ಸಿನಿಮಾವೊಂದರ ಚಿತ್ರೀಕರಣದ ವೇಳೆ ಭೇಟಿಯಾಗಿದ್ದ ಜೋಡಿ ಇದೀಗ ಇಬ್ಬರು ಮಕ್ಕಳ ತಂದೆ-ತಾಯಿ..
ಹೌದು.. ಕರೀನಾ ಮತ್ತು ಸೈಪ್ ಲವ್ ಸ್ಟೋರಿ ಕುರಿತು ಸೆಲೆಬ್ರಿಟಿ ಛಾಯಾಗ್ರಾಹಕ ಡಬ್ಬೂ ರತ್ನಾನಿ ಹೊಸ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಕರೀನಾ ಮತ್ತು ಸೈಫ್ ಅವರ ಪ್ರೇಮಕಥೆ ಶುರುವಾಗಿದ್ದು 2005 ರಲ್ಲಿ. ಅದೂ ಕೂಡ ತಮ್ಮ ಸ್ಟುಡಿಯೋದಲ್ಲಿ ಅಂತ ಹೇಳಿಕೊಂಡಿದ್ದಾರೆ.
ರೆಡ್ಡಿಟ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ಪ್ರಾರಂಭಿಸಿದ್ದ ದಬ್ಬೂ ರತ್ನಾನಿಗೆ ನೆಟ್ಟಿಗರೊಬ್ಬರು ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಹಳೆಯ ಫೋಟೋವನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರತ್ನಾನಿ, ಇಬ್ಬರೂ ನನ್ನ ಸ್ಟುಡಿಯೋದಲ್ಲಿ ಮೊದಲ ಬಾರಿಗೆ ಭೇಟಿಯಾದರು ಅಂತ ಬರೆದು ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಎಲ್ಲವೂ ಆರಂಭವಾದ ಸ್ಥಳ ಇದೇ ಅಂತ ಕ್ಯಾಪ್ಶನ್ ಕೂಡ ಬರೆದುಕೊಂಡು ಉತ್ತರಿಸಿದ್ದಾರೆ.
ಸೈಫ್ ಅಲಿಖಾನ್ ನಟಿ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದರು. 1991ರಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರ ಮದುವೆಗೆ ಕರೀನಾ ಬಂದು ಶುಭಕೋರಿದ್ದು, ಆ ಸಂದರ್ಭದಲ್ಲಿ ಸೈಫ್, ಕರೀನಾಗೆ ಥ್ಯಾಂಕ್ಯೂ ಮಗಳೇ ಅಂತ ಹೇಳಿದ್ದರಂತೆ. ಇದೀಗ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.
Share this content:
Post Comment