36 ವಯಸ್ಸಿನ ಸಿಂಗಲ್ ಸುಂದರಿ ಅನು ಮಿಂಗಲ್ ಆಗೋಕೆ ರೆಡಿ..! ಕೊನೆಗೂ ಮದುವೆ ಸುದ್ದಿ ಬಿಚ್ಚಿಟ್ಟ ಆ್ಯಂಕರ್
Anchor Anushree Marriage : ಜನಪ್ರಿಯ ನಿರೂಪಕಿ, ನಟಿ ಅನುಶ್ರೀ ಕನ್ನಡ ಕಿರುತೆರೆ ಲೋಕದ ಸ್ಟಾರ್.. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆ ಜೊತೆಗೆ ತಮ್ಮ ಮಾತು, ಉದಾರ ಮನಸ್ಸಿನಿಂದ ಪ್ರೇಕ್ಷಕರನ್ನು ಮನರಂಜಿಸುವ ಅನು ಸಧ್ಯ ಸರಿಗಮಪ ಸಂಗೀತ ರಿಯಾಲಿಟಿ ಷೋನಲ್ಲಿ ಬಿಜಿಯಾಗಿದ್ದಾರೆ.
36ನೇ ವಯಸ್ಸಿನಲ್ಲೂ ಸಿಂಗಲ್ ಆಗಿರುವ ಅನು, ಇದೀಗ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹೌದು.. ಅನುಶ್ರೀ ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಸಿನಿ ಆಂಕರ್‌ಗಳಲ್ಲಿ ಒಬ್ಬರು.. ಸಧ್ಯ ಅನು ತಮ್ಮ ಮದುವೆಯ ವಿಚಾರವಾಗಿ ಮಾತನಾಡಿದ್ದು, ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
ಚಿಲ್ಲಿಂಗ್ ವಿಥ್ ಚಿಲಿಂಬಿ ಎಂಬ ತುಳು ಪಾಡ್ ಕಾಸ್ಟ್ ಗೆ ನೀಡಿದ ಸಂದರ್ಶನದಲ್ಲಿ ಅನು ತಮ್ಮ ಮದುವೆಯ ವಿಚಾರದ ಬಗ್ಗೆ ಮಾತನಾಡಿದ್ದಾರೆ.. ಈಗಾಗಲೇ ಯೂಟ್ಯೂಬ್‌ನಲ್ಲಿ ನನಗೆ ಸಾವಿರ ಬಾರಿ ಮದುವೆ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಜತೆಗೂ ಮದುವೆಯಾಗಿದೆ ಅಂತ ಹೇಳಿದ್ದಾರೆ ಅಂತ ತಮ್ಮ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬಂದ ಟ್ರೋಲ್‌ಗಳ ಬಗ್ಗೆ ಅನು ಹೇಳಿಕೊಂಡರು.
ಅಲ್ಲದೆ, ನಾನು ಯಾವುದೇ ಸಿಂಗಲ್ ಹುಡುಗನ ಜೊತೆ ಕಾಣಿಸಿಕೊಂಡ್ರೆ ಸಾಕು, ಪೋಟೋ ಹಾಕಿ ಅವರ ಜೊತೆ ನನ್ನ ಮದುವೆ ಮಾಡಿಸಿ ಬಿಡ್ತಾರೆ.. ಹೀಗಾಗಿ ಅದನ್ನೆಲ್ಲ ನಾನು ಸಿರೀಯಸ್ ಆಗಿ ತೆಗೆದುಕೊಳ್ಳುವುದಿಲ್ಲ.. ಅಪ್ಪ ಅಮ್ಮನ ಕೆಟ್ಟದಿನಗಳನ್ನು ನೋಡಿ ಮದುವೆ ಬೇಡ ಅಂತಿದ್ದೆ, ಈಗ ಮದುವೆಯಾಗುವ ನಿರ್ಧಾರ ಮಾಡಿದ್ದೇನೆ.. ನೀವೇ ಹುಡುಗನನ್ನು ಹುಡುಕಿಕೊಡಿ ಅಂತ ಅನು ಹೇಳಿದ್ದಾರೆ.
Share this content:
Post Comment