Loading Now

6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ಚಾರ್ಲಿ..! ವಿಡಿಯೋ ಹಂಚಿಕೊಂಡ ನಟ ರಕ್ಷಿತ್‌

6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ಚಾರ್ಲಿ..! ವಿಡಿಯೋ ಹಂಚಿಕೊಂಡ ನಟ ರಕ್ಷಿತ್‌

Charlie gave birth to puppies : 777 ಚಾರ್ಲಿ ಸ್ಯಾಂಡಲ್‌ವುಡ್‌ನ ಬ್ಲಾಕ್ಬಸ್ಟರ್‌ ಹಿಟ್‌ ಸಿನಿಮಾ. ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಜನ ಮನ್ನಣೆ ಪಡೆದ ಕನ್ನಡಿಗನ ಸಿನಿಮಾ. ಇತ್ತೀಚಿಗೆ ಈ ಸಿನಿಮಾದ ಎರಡನೇ ಭಾಗ ಬರುವುದಾಗಿ ಸುದ್ದಿಯಾಗಿತ್ತು. ಇದರ ನಡುವೆ ನಟ ರಕ್ಷಿತ್‌ ಶೆಟ್ಟಿ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ.

ಈ ಸಿನಿಮಾದ ಕೇಂದ್ರ ಬಿಂದು ಅಂದ್ರೆ ಚಾರ್ಲಿ.. ಕ್ಯೂಟ್‌ ಚಾರ್ಲಿ ತನ್ನ ತುಂಟಾಟ, ನಟಯಿಂದ ಎಲ್ಲರಿಗೂ ತುಂಬಾ ಇಷ್ಟವಾಗಿದ್ದಳು.. ಸಧ್ಯ ಚಾರ್ಲಿ 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ್ದು, ಈ ಕುರಿತ ವಿಡಿಯೋ ಹಂಚಿಕೊಂಡು ರಕ್ಷಿತ ಮಾಹಿತಿ ನೀಡಿದ್ದಾರೆ.. ಮೈಸೂರಿನ ಪ್ರಮೋದ್‌ ಮನೆಯಿಂದ ಲೈವ್‌ ಬಂದಿದ್ದಾರೆ.

ಇದು ಸರ್ಪ್ರೈಸ್‌ ಲೈವ್‌.. ಲೈವ್‌ ಬರೋಕೆ ಕಾರಣ ಇದೆ.. 777 ಚಾರ್ಲಿ ಸಿನಿಮಾ ರಿಲೀಸ್‌ ಆಗಿ 2 ವರ್ಷ ಆಗ್ತಾ ಬಂತು.. ಸಿನಿಮಾ ಪ್ರಾರಂಭವಾದಾಗಿನಿಂದ ನಮಗೆ ಒಂದು ಕೊರತೆ ಇತ್ತು. ಚಾರ್ಲಿಗೆ ವಯಸ್ಸಾಗಿತ್ತು, ಅವಳು ತಾಯಿ ಆದ್ರೆ ಈ ಜರ್ನಿ ಕಂಪ್ಲೀಟ್‌ ಆಗ್ತಿತ್ತು ಅಂತ ಎಲ್ಲರೂ ಅಂದುಕೊಂಡಿದ್ದೇವು.

ಆದರೆ ಚಾರ್ಲಿಗೆ ವಯಸ್ಸಾಗಿದ್ದ ಕಾರಣ ಅಮ್ಮ ಆಗ್ತಾಳೋ ಇಲ್ಲವೋ ಎನ್ನುವ ಅನುಮಾನ ವಿತ್ತು. ಆದ್ರೆ ಕೊನೆಗೂ ನಾವು ಅಂದುಕೊಂಡಂತಾಗಿದೆ.. ಮೇ 9 ತಂದು ಚಾರ್ಲಿ 6 ಮುದ್ದಾದ ಪಪ್ಪಿಸ್‌ಗೆ ಜನ್ಮ ನೀಡಿದ್ದಾಳೆ ಅಂತ ರಕ್ಷಿತ್‌ ಲೈವ್‌ ಬಂದು ಚಾರ್ಲಿ ಮತ್ತು ಅವಳ ಕ್ಯೂಟ್‌ ಪಪ್ಪಿಸ್‌ ತೋರಿಸಿದ್ದಾರೆ.

Share this content:

Post Comment

You May Have Missed