Loading Now

ಚೇತನ್ ಚಂದ್ರ ಮೇಲೆ ಹಲ್ಲೆ..! ರಕ್ತಸ್ರಾವದ ನಡುವೆ ಲೈವ್ ಬಂದು ನ್ಯಾಯ ಕೇಳಿದ ನಟ

ಚೇತನ್ ಚಂದ್ರ ಮೇಲೆ ಹಲ್ಲೆ..! ರಕ್ತಸ್ರಾವದ ನಡುವೆ ಲೈವ್ ಬಂದು ನ್ಯಾಯ ಕೇಳಿದ ನಟ

Attack on actor Chetan Chandra : ಸ್ಯಾಂಡಲ್‌ವುಡ್‌ ನಟ ಚೇತನ್​ ಚಂದ್ರ ಅವರ ಮೇಲೆ ಕೆಲವು ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ನಟ ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ..

ತಾಯಂದಿರ ದಿನದ ಪ್ರಯುಕ್ತ ನಟ ತನ್ನ ತಾಯಿಯ ಜೊತೆ ದೇವಸ್ಥಾನಕ್ಕೆ ಹೋಗಿ ವಾಪಸ್ಸು ಬರುವ ವೇಳೆ ಬೆಂಗಳೂರಿನ ಕಗ್ಗಲಿಪುರ ಸಮೀಪ ಈ ಘಟನೆ ನಡೆದಿದೆ. ಸುಮಾರು 20 ಜನರು ಚೇತನ್​ ಚಂದ್ರ ಅವರ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು ಘಟನೆ ಬಗ್ಗೆ ವಿವರ ನೀಡಿರುವ ನಟ ಚೇತನ್ ಚಂದ್ರ, ಇದು ನನ್ನ ಜೀವನದ ಅತಿ ಕೆಟ್ಟ ಅನುಭವ. ನನ್ನ ಕಾರನ್ನು ಅಡ್ಡಗಟ್ಟಿ ಹೊಡೆದಿದ್ದಾರೆ. ಏಕೆ ದಾಳಿ ಮಾಡಿದ್ರು ಅಂತ ನನಗೆ ಗೊತ್ತಿಲ್ಲ.. ಚನ್ನಾಗಿ ಕುಡಿದು ನನ್ನ ಗಾಡಿಗೆ ಡಿಕ್ಕಿ ಹೊಡೆದ ಅವನನ್ನು ಹಿಡಿದು ಪ್ರಶ್ನೆ ಮಾಡುವಾಗ ಅವರ ಕಡೆಯವರು ಬಂದು ನನ್ನ ಮೇಲೆ ಹಲ್ಲೆ ಮಾಡಿದರು.. ಬಳಿಕ ಕಗ್ಗಲಿಪುರ ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದೇನೆ. ಪೊಲೀಸರು ಪ್ರಥಮ ಚಿಕಿತ್ಸೆ ಮಾಡಿಸಿಕೊಳ್ಳಿ ಅಂತ ಹೇಳಿದ್ದಾರೆ.. ಅಂತ ವಿಡಿಯೋದಲ್ಲಿ ಚೇತನ್ ಹೇಳಿಕೊಂಡಿದ್ದಾರೆ.

Share this content:

Post Comment

You May Have Missed