RCB Vs DC ಮ್ಯಾಚ್‌ಗೂ ಮುನ್ನ ಡಿನ್ನರ್ ಡೇಟ್ ಮಾಡಿದ ವಿರುಷ್ಕಾ..! ಫೊಟೋಸ್ ವೈರಲ್
Virat kohli Anushka sharma : ಅಕಾಯ್ ಹುಟ್ಟಿದ ನಂತರ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೊದಲ ಬಾರಿಗೆ ಡಿನ್ನರ್ ಡೇಟ್ ಮಾಡಿದ್ದಾರೆ. ಈ ಕುರಿತ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇಂದು ನಡೆಯುತ್ತಿರುವ RCB vs DC ಪಂದ್ಯಕ್ಕೂ ಹಿಂದಿನ ದಿನ ಅಂದ್ರೆ ಶನಿವಾರ ಈ ಜೋಡಿ ಊಟಕ್ಕೆ ತೆರಳಿದ್ದರು.
ಹೌದು.. ಅಕಾಯ್ ಜನನದ ನಂತರ ವಿರುಷ್ಕಾ ಜೋಡಿ ತಮ್ಮ ಸಮಯ ಕಳೆಯುತ್ತಿದ್ದಾರೆ. ಇದುವರೆಗೂ ತಮ್ಮ ಎರಡನೇ ಮಗುವಿನ ಮುಖವನ್ನು ಈ ಜೋಡಿ ಎಲ್ಲಿಯೂ ರಿವೀಲ್ ಮಾಡಿಲ್ಲ. ಗೌಪ್ಯತೆಯನ್ನು ಬಯಸಿರುವ ವಿರಾಟ್ ಐಪಿಎಲ್ 2024 ರ ಮೇಲೆ ಕೇಂದ್ರೀಕರಿಸಿದ್ದು, ಅನುಷ್ಕಾ ‘ಚಕ್ಡಾ ಎಕ್ಸ್‌ಪ್ರೆಸ್’ ಗಾಗಿ ತಯಾರಿ ನಡೆಸುತ್ತಿದ್ದಾರೆ.
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ತಮ್ಮ ಎರಡನೇ ಮಗು ಅಕಾಯ್ ಎಂಬ ಗಂಡು ಮಗುವನ್ನು ಸ್ವಾಗತಿಸಿದರು. ಕಿಂಗ್ ಪುತ್ರ ಮುಖವನ್ನು ನೋಡಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೇ ವೇಳೆ ನಿನ್ನೆ ಬೆಂಗಳೂರಿನಲ್ಲಿ ಕ್ಯಾಶುಯಲ್ ಬ್ರಂಚ್‌ಗೆ ತೆರಳಿದ್ದ ವಿರಾಟ್ ಅನುಷ್ಕಾ ಜೋಡಿಯ ಫೋಟೋಸ್ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿವೆ.
ಫೋಟೋದಲ್ಲಿ ಅನುಷ್ಕಾ ವಿರಾಟ್ ಅವರ ಭುಜದ ಮೇಲೆ ತನ್ನ ಕೈಗಳನ್ನು ಇಟ್ಟುಕೊಂಡು ನಿಂತಿರುವುದನ್ನು ಕಾಣಬಹುದು. ಇಬ್ಬರೂ ಕಪ್ಪು ಬಟ್ಟೆಗಳಲ್ಲಿ ಧರಿಸಿದ್ದಾರೆ. ಅಕಾಯ್‌ಗೆ ಜನನದ ನಂತರ ಅನುಷ್ಕಾ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಸಧ್ಯ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ..
Share this content:
Post Comment