Loading Now

ಗಂಡನಿಗಾಗಿ ಕಿಡ್ನಿ ತ್ಯಾಗ , ಮಕ್ಕಳ ಬೆಳವಣಿಗೆಗಾಗಿ ಸರ್ವಸ್ವವನ್ನು ಧಾರೆಯೆರೆದ ನಟ ದರ್ಶನ್ ತಾಯಿ..! ಅಮ್ಮಂದಿರ ದಿನದ ಸ್ಪೆಷಲ್

ಗಂಡನಿಗಾಗಿ ಕಿಡ್ನಿ ತ್ಯಾಗ , ಮಕ್ಕಳ ಬೆಳವಣಿಗೆಗಾಗಿ ಸರ್ವಸ್ವವನ್ನು ಧಾರೆಯೆರೆದ ನಟ ದರ್ಶನ್ ತಾಯಿ..! ಅಮ್ಮಂದಿರ ದಿನದ ಸ್ಪೆಷಲ್

HAPPY MOTHER’S DAY: ತೂಗುದೀಪ ಶ್ರೀನಿವಾಸ್​ ಕನ್ನಡ ಚಿತ್ರರಂಗದ ಅದ್ಭುತ ನಟ. ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡ ಜನ ಮನ ಗೆದ್ದ ಅಪ್ರತಿಮ ಕಲಾವಿದ. ತಂದೆಯಂತೆ ಅವರ ಪುತ್ರ ದರ್ಶನ್​ ಸಹ ದೊಡ್ಡ ಸ್ಟಾರ್​ ನಟನಾಗಿ ಬೆಳೆದರು. ದಿನಕರ್​ ತೂಗುದೀಪ ಕೂಡ ನಿರ್ದೇಶಕನಾಗಿ ಒಳ್ಳೆಯ ಖ್ಯಾತಿ ಗಳಿಸಿದರು. ಈ ಮೂವರ ಬೆನ್ನ ಹಿಂದೆ ದೊಡ್ಡ ಶಕ್ತಿಯಾಗಿ ಕೆಲಸ ಮಾಡಿದವರು ಮೀನಾ ತೂಗುದೀಪ..

ಹೌದು… 1973ರ ನವೆಂಬರ್ 15ರಂದು ತೂಗುದೀಪ್ ಶ್ರೀನಿವಾಸ್ ಅವರು ಕೊಡಗಿನ ಪೊನ್ನಂಪೇಟೆಯ ಮೀನಾ ಅವರನ್ನು ಮದುವೆಯಾದರು. ಸುಂದರ ಸಂಸಾರಕ್ಕೆ ದರ್ಶನ್, ದಿನಕರ್ ಹಾಗೂ ದಿವ್ಯ ಸೇರಿ ಮೂವರು ಮಕ್ಕಳೇ ಸಾಕ್ಷಿ.. ಈ ಮೂವರ ಬೆನ್ನ ಹಿಂದೆ ದೊಡ್ಡ ಶಕ್ತಿಯಾಗಿ ಕೆಲಸ ಮಾಡಿದವರು ದರ್ಶನ್​ ತಾಯಿ ಮೀನಾ ತೂಗುದೀಪ.ತೂಗದೀಪ ಶ್ರೀನಿವಾಸ ಅವರ ನಿಧನದ ಏಕಾಂಗಿಯಾಗಿ ನಿಂತು ಕನ್ನಡ ಸಿನಿರಂಗದ ಸೇವೆಗೆ ದಚ್ಚು ಅವರನ್ನ ಉಡುಗೊರೆಯಾಗೆ ನೀಡಿದರು.

ದರ್ಶನ್ ಅವರಿಗೆ ತಾಯಿ ಮೀನಾ ತೂಗದೀಪ ಎಂದರೆ ಬಲು ಪ್ರೀತಿ. ಅಮ್ಮನ ಕುರಿತ ಸಮಯ ಸಿಕ್ಕಾಗೆಲ್ಲ ಹೇಳುತ್ತಲೇ ಇರ್ತಾರೆ ಡಿಬಾಸ್.. ಕೇಶವಮೂರ್ತಿಯವರ ನಿರ್ದೇಶನದ ‘ತೂಗುದೀಪ’ ಎಂಬ ಚಲನಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಂದಿನಿಂದ ತೂಗುದೀಪ ಶ್ರೀನಿವಾಸ ಎಂಬ ಹೆಸರು ಬಂತು. ಇಂದು ಈ ಹೆಸರನ್ನು ಅವರ ಮಕ್ಕಳು ಆಕಾಶದೆತ್ತರಕ್ಕೆ ಬೆಳೆಸಿದ್ದಾರೆ..

ತೂಗುದೀಪ್ ಶ್ರೀನಿವಾಸ್ ಅವರು ಸಕ್ಕರೆ ಕಾಯಿಲೆ ಮತ್ತು 2 ಕಿಡ್ನಿ ವೈಫಲ್ಯದಿಂದ ಬಳಲತೊಡಗಿದ್ದರು. ಆಗ ಅವರಿಗೆ ಒಂದು ಕಿಡ್ನಿಯ ಅವಶ್ಯಕತೆ ಇತ್ತು. ಆದರೆ ಕಿಡ್ನಿ ಕೊಡುವವರಾಗಲಿ, ಅದಕ್ಕೆ ಹಣ ನೀಡುವಷ್ಟು ಸ್ಥಿತಿವಂತರೂ ಆಗಿರಲಿಲ್ಲ. ಕೊನೆಗೆ ಮೀನಾ ಅವರು ತಮ್ಮ ಗಂಡನಿಗಾಗಿ ಒಂದು ಕಿಡ್ನಿಯನ್ನು ಕೊಟ್ಟು ಪತಿಯ ಜೀವ ಉಳಿಸಿಕೊಂಡಿದ್ದರು..

Share this content:

Post Comment

You May Have Missed