ಪವನ್ ಕಲ್ಯಾಣ ಪರ ರಾಮ್ ಚರಣ್ ಮತಯಾಚನೆ..! ಎಪಿ ಚುನಾವಣಾ ಅಖಾಡದಲ್ಲಿ ಮೆಗಾ ಪವರ್ ಸ್ಟಾರ್
Ram charan campaign in Pithapuram : ಆಂಧ್ರಪ್ರದೇಶ ಚುನಾವಣೆ ದೇಶದ ಗಮನ ಸೆಳೆಯುತ್ತಿದೆ. ಮೈತ್ರಿ ಪಕ್ಷಗಳಾದ ಜನಸೇನಾ, ಬಿಜೆಪಿ, ಟಿಡಿಪಿ ಭರ್ಜರಿ ಪ್ರಚಾರ ನಡೆಸುತ್ತಿವೆ. ಅಲ್ಲದೆ, ಪವನ್ ಕಲ್ಯಾಣ್ ಅವರ ಪರ ಟಾಲಿವುಡ್ ನಟರು ಪೀಲ್ಡ್‌ಗೆ ಇಳಿದು ಪವರ್ ಸ್ಟಾರ್ ಪರ ಮತಯಾಚನೆ ಮಾಡುತ್ತಿದ್ದಾರೆ.
ನಟ ಚಿರಂಜೀವಿ ಪುತ್ರ ರಾಮ್ ಚರಣ್ ಚಿಕ್ಕಪ್ಪ ಪವನ್ ಕಲ್ಯಾಣ್ ಪರ ಪಿಠಾಪುರದಲ್ಲಿ ಭರ್ಜರಿ ಮತಭೇಟೆ ನಡೆಸಿದ್ದಾರೆ. ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಪಿಠಾಪುರಂ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಚಿಕ್ಕಪ್ಪನ ಪರ ರಾಮ್ ಮತಯಾಚನೆ ನಡೆಸುತ್ತಿದ್ದಾರೆ.
ಜನಸೇನಾ ಪಕ್ಷಕ್ಕೆ ಬೆಂಬಲ ಸೂಚಿಸಲು ಹಲವು ಸೆಲೆಬ್ರಿಟಿಗಳು ಪಿಠಾಪುರಕ್ಕೆ ಆಗಮಿಸುತ್ತಿದ್ದಾರೆ. ಜಬರ್ದಸ್ತ್ ಕಲಾವಿದರ ತಂಡ ಮತ್ತು ಮೆಗಾ ಹೀರೋಗಳಾದ ಸಾಯಿ ಧರಂ ತೇಜ್ ಮತ್ತು ವರುಣ್ ತೇಜ್ ಕೂಡ ಪವನ್ ಕಲ್ಯಾಣ್ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.
ಇನ್ನು ಟಾಲಿವುಡ್ ಸೂಪರ್ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ ಕೂಡ ತಮ್ಮ ಪವನ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಧ್ಯ ಚಿರು ಪುತ್ರ ತಮ್ಮ ಚಿಕ್ಕಪ್ಪ ಪವನ್ ಕಲ್ಯಾಣ್‌ಗೆ ಬೆಂಬಲ ಸೂಚಿಸಿ, ಫಿಠಾಪುರ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದು, ಮತ ಪ್ರಚಾರದಲ್ಲಿ ತೊಡಗಿದ್ದಾರೆ.
Share this content:
Post Comment