ಸಾಯಲು ಹೊರಟಿದ್ದ ನಟ ರಜನಿಕಾಂತ್ ಕನಸಿನಲ್ಲಿ ಬಂದ ʼಗುರು ರಾಯರುʼ ಹೇಳಿದ್ದೇನು ಗೊತ್ತೆ..! ಅದ್ಭುತ ಪವಾಡ
Rajinikanth spiritual journey : ನಟ ರಜನಿಕಾಂತ್ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ತಲೈವಾಗೆ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. 73ರ ಹರೆಯದಲ್ಲೂ ಸೂಪರ್ ಸ್ಟಾರ್ ಕ್ರೇಜ್ ಕೊಂಚವೂ ಕಡಿಮೆಯಾಗಿಲ್ಲ.
ಏಷ್ಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ರಜನಿಕಾಂತ್ ಅವರು ಹಿಂದೊಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಸ್ವತಃ ಈ ಕುರಿತು ಅವರೇ ಹೇಳಿಕೊಂಡಿದ್ದಾರೆ. 1992ರಲ್ಲಿ ತಮ್ಮ ಪತ್ನಿ ಲತಾ ರಜನಿಕಾಂತ್ ಅವರು ಸಿಂಗಾಪುರದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಜನಿಕಾಂತ್, ಕಂಡಕ್ಟರ್‌ನಿಂದ ಸೂಪರ್‌ಸ್ಟಾರ್‌ವರೆಗಿನ ತಮ್ಮ ಜೀವನದ ಕುರಿತು ಮಾತನಾಡುತ್ತಾ, ಅಚ್ಚರಿ ವಿಚಾರವೊಂದನ್ನು ಬಹಿರಂಗ ಪಡಿಸಿದರು.
ಜೀವನದಲ್ಲಿ ಯಾವುದಕ್ಕೂ ಹೆದರದ ರಜನಿ, ಒಂದು ಹಂತದಲ್ಲಿ ಗಾಬರಿಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದರಂತೆ. “ನಾನು ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದ ದಿನ ನನಗೆ ಒಂದು ಕನಸು ಬಿತ್ತು. ಅದರಲ್ಲಿ ಬಿಳಿ ಗಡ್ಡದ ಸಂತನೊಬ್ಬ ನದಿಯ ಆಚೆ ಕಾಣಿಸಿಕೊಂಡು ನನ್ನನ್ನು ಹತ್ತಿರಕ್ಕೆ ಬರುವಂತೆ ಸನ್ನೆ ಮಾಡಿದ. ನಾನು ಈಜುವ ಬದಲು ಅವನ ಕಡೆಗೆ ಓಡಿದೆ. ಮರುದಿನ ನಾನು ಕನಸಿನಲ್ಲಿ ಕಂಡ ದೇವರ ಬಗ್ಗೆ ವಿಚಾರಿಸಿದಾಗ, ಅದು ಶ್ರೀ ರಾಘವೇಂದ್ರ ಸ್ವಾಮಿ ಅಂತ ತಿಳಿದುಬಂತು, ತಕ್ಷಣವೇ ಮಠಕ್ಕೆ ಹೋದೆ ಅಂತ ರಜನಿ ಗುರು ರಾಯರ ಮಹಿಮೆಯನ್ನು ಕೊಂಡಾಡಿದ್ದಾರೆ.
Share this content:
Post Comment