ರಾಜಕೀಯ ಪ್ರವೇಶಕ್ಕೆ ಸೋನು ರೆಡಿ..! ಆದ್ರೆ ಆ ಕೆಲಸ ಮಾಡಲ್ವಂತೆ ರೀಲ್ಸ್ ಸ್ಟಾರ್
Sonu gowda: ರೀಲ್ಸ್ ಸ್ಟಾರ್ , ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋನು ಗೌಡ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಈ ಚೆಲುವೆ ರಾಜಕೀಯ ಪ್ರವೇಶ ಕುರಿತು ಮಾತನಾಡಿದ್ದು ಈ ಕುರಿತ ವಿಡಿಯೋ ವೈರಲ್ ಆಗುತ್ತಿದೆ..
ಈ ಪೈಕಿ ಅವರು ತಮ್ಮ ಫಾಲೋವರ್ಸ್ ಒಬ್ಬರ ಪ್ರಶ್ನೆಗೆ ಉತ್ತರ ನೀಡುವಾಗ ನಟಿ ಸೋನು ಗೌಡ ತಾವು ರಾಜಕೀಯಕ್ಕೆ ಬರುವುದಾಗಿ ತಿಳಿಸಿದ್ದಾರೆ. ನನಗೆ ಮೊದಲು ಹೀರೋಯಿನ್ ಆಗಬೇಕು ಅಂತ ಅಸೆಯಿತ್ತು. ಆದರೆ, ಯಾಕೋ ಗೊತ್ತಿಲ್ಲ ರಾಜಕೀಯ ಪ್ರವೇಶ ಮಾಡಬೇಕು, ಅಲ್ಲಿ ಎನಾದರೂ ಸಾಧಿಸಬೇಕು ಅಂತ ಆಸೆಯಿದೆ ಎಂದು ತಿಳಿಸಿದರು. ಅಷ್ಟೇ ಅಲ್ಲದೇ ಮದುವೆ ಆಗೋದೇ ಇಲ್ಲ ಅಂತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹೌದು.. ಟಿಕ್ ಟಾಕ್ ಮೂಲಕ ಸದ್ದು ಮಾಡಿದ್ದ ಸೋನು ರೀಲ್ಸ್ ಮೂಲಕ ಜನರಿಗೆ ಪರಿಚಯವಾದರು. ಇತ್ತೀಚೆಗೆ ಅಕ್ರಮವಾಗಿ ಮಗುವೊಂದನ್ನು ದತ್ತು ಪಡೆದ ಕೇಸ್ ಮೇಲೆ ಜೈಲಿಗೂ ಹೋಗಿ ಬಂದಿದ್ದಾರೆ. ಸಧ್ಯ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅಭಿಮಾನಿಗಳ ಜೊತೆ ತಮ್ಮ ಜೈಲು ಅನುಭವಗಳನ್ನು ಹೇಳಿಕೊಳ್ಳುತ್ತಿದ್ದಾರೆ.ಸೋನು ಮುಂದಿನ ಪ್ಲ್ಯಾನ್ ಏನು..? ಸಿನಿಮಾದಲ್ಲಿ ನಟಿಸುತ್ತಿರಾ..? ಎಂಬ ಅಭಿಮಾನಿಗಳ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ
Share this content:
Post Comment