ಹಿರಿಯ ನಟ ಮುಸುರಿ ಕೃಷ್ನಮೂರ್ತಿ ಅವರ ಪತ್ನಿ, ಮಕ್ಕಳು ಯಾರು ಗೊತ್ತೆ..!
Musuri Krishnamurthy : ಹಿರಿಯ ನಟ ಮುಸುರಿ ಕೃಷ್ನಮೂರ್ತಿ ತಮ್ಮ ನಟನಾ ಕೌಶಲ್ಯದಿಂದ ಕನ್ನಡ ಸಿನಿರಂಗವನ್ನು ಮುಗಿಲೆತ್ತರಕ್ಕೆ ತೆಗೆದುಕೊಂಡು ಹೋದ ಅಂದಿನ ಕಾಲದ ನಟರಲ್ಲಿ ಒಬ್ಬರು. ಖಳನಾಯಕನಾಗಿ ಸಿನಿಪಯಣ ಆರಂಭಿಸಿದ ಇವರು, ನಂತರ ಹಾಸ್ಯ ಪಾತ್ರಗಳಲ್ಲಿ ನಟಿಸಿ ಜನ ಮಗ ಗೆದ್ದರು.
ಹೌದು.. ಮುಸುರಿ ಕೃಷ್ಣ ಅವರು 1930 ರಲ್ಲಿ ಮೈಸೂರಿನ ಬೆಟ್ಟದಪುರದಲ್ಲಿ ಜನಿಸಿದರು. ಅವರ ತಂದೆಯ ಹೆಸರು ವಿಶ್ವೇಶ್ವರಯ್ಯ. ಜಮೀನ್ದಾರರ ಮಗನಾಗಿ ಜನಿಸಿದ ಇವರು, ಬಾಲ್ಯದಿಂದಲೂ ಸಂಗೀತ ಮತ್ತು ಅಭಿನಯಗಳಲ್ಲಿ ಆಸಕ್ತಿ ಹೊಂದಿದ್ದರು.
1943 ರಲ್ಲಿ ಬಿಡುಗಡೆಯಾದ ʼವಾಣಿʼ ಸಿನಿಮಾದಲ್ಲಿ ಬಾಲನಟನಾಗಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕೃಷ್ಣ ಅವರು ಪ್ರವೇಶ ಮಾಡಿದರು. 1953 ರಲ್ಲಿ ಮಂಗಳ ಗೌರಿ, ಕನ್ಯಾದಾನ ಮುಂತಾದ ಚಿತ್ರಗಳ ಮೂಲಕ ಮುನ್ನೆಲೆಗೆ ಬಂದರು. ಸುಶೀಲಮ್ಮ ಎಂಬುವವರನ್ನು ಮದುವೆಯಾದ ಕೃಷ್ಣ ಅವರಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯರಿದ್ದಾರೆ.
ಪುತ್ರ ಜಯಸಿಂಹ ಕನ್ನಡ ಚಿತ್ರರಂಗದಲ್ಲಿ ನಟ ಮತ್ತು ನಿರ್ಮಾಪಕ, ನಿರ್ದೇಕರಾಗಿ ಸಕ್ರಿಯವಾಗಿದ್ದಾರೆ. ಗುರುದತ್ ಮುಸುರಿ ಛಾಯಾಗ್ರಾಹಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇನ್ನು ತಮ್ಮ 55ನೇ ವಯಸ್ಸಿನಲ್ಲಿ ಮುಸುರಿ ಕೃಷ್ಣಮೂರ್ತಿಯವರು 1985ರಲ್ಲಿ ಮರಣ ಹೊಂದಿದರು.
Share this content:
Post Comment