ಬೇಡ ಅಂತ ಎಷ್ಟು ಹೇಳಿದ್ರೂ ಆ ನಟ ನಾಲಿಗೆಯಿಂದ ನನ್ನ….! ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿ ಸದಾ
Actress Sadha on Jayam movie : ಬಹುಭಾಷಾ ನಟಿ ಸದಾ ಕನ್ನಡದ ಹಿಟ್ ಸಿನಿಮಾಗಳಾದ ‘ಮೊನಾಲಿಸಾ’, ‘ಮೋಹಿನಿ 9886788888’, ‘ಹುಡುಗ ಹುಡುಗಿ’, ‘ಮೈಲಾರಿ’, ‘ಮಲ್ಲಿಕಾರ್ಜುನ’, ‘ಆರಕ್ಷಕ’ ಹೀಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡಿಗರಿಗೆ ಚಿರಪರಿಚಿತರಾಗಿರುವ ಈ ನಟಿ ಇತ್ತೀಚಿಗೆ ಸಿನಿಮಾವೊಂದಲ್ಲಿ ತಮಗಾಗ ಕಹಿ ಅನುಭವ ತೆರೆದಿಟ್ಟಿದ್ದಾರೆ.
ತೆಲುಗು ಸೂಪರ್ ಹಿಟ್ ʼಜಯಂʼ ಸಿನಿಮಾ ಮೂಲಕ ಗುರುತಿಸಿಕೊಂಡಿರುವ ಸದಾ, ʼರಾನು ರಾನು ಅಂಟೋಂದಿ ಸಿನ್ನದೋ..ʼ ಸಾಂಗ್ ಕೇಳಿದ್ರೆ ಥಟ್ ಅಂತ ನೆನಪಿಗೆ ಬರ್ತಾರೆ. 2004 ರಲ್ಲಿ ನಟಿ ಮೊನಾಲಿಸಾ ಸಿನಿಮಾದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟು ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಇನ್ನು ಇತ್ತೀಚಿಗೆ ಸಂದರ್ಶವೊಂದರಲ್ಲಿ ನಟಿ, ತೇಜ ನಿರ್ದೇಶನದ ಜಯಂ ಸಿನಿಮಾದಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಜಯಂನಲ್ಲಿ ಗೋಪಿಚಂದ್ ನನ್ನ ಕೆನ್ನೆಯನ್ನು ನಾಲಿಗೆಯಿಂದ ನೆಕ್ಕುವ ದೃಶ್ಯವಿದೆ. ಈ ಸೀನ್‌ನಲ್ಲಿ ನಟಿಸೋಕೆ ನನಗೆ ಇಷ್ಟವಿರಲಿಲ್ಲ. ಆದರೆ ಡೈರೆಕ್ಟರ್ ಬಲವಂತ ಮಾಡಿ ನಟಿಸುವಂತೆ ಮಾಡಿದರು. ಈ ದೃಶ್ಯದ ಬಳಿಕ ನಾನು 10 ಸಾರಿ ಮುಖ ತೊಳೆದುಕೊಂಡಿದ್ದೆ. ಈ ಘಟನೆ ನನ್ನ ಮನಸ್ಸಿಗೆ ಸಾಕಷ್ಟು ನೋವು ನೀಡಿತ್ತು ಅಂತ ಸದಾ ಬೇಸರ ತೋಡಿಕೊಂಡರು.
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment