ಟಾಕ್ಸಿಕ್ ಸಿನಿಮಾದಿಂದ ಹಿಂದೆ ಸರಿದ ಕರೀನಾ..! ಯಶ್ ತಂಗಿ ಪಾತ್ರ ಮಾಡಬೇಕಿದ್ದ ಬಿಟೌನ್ ಬ್ಯೂಟಿ
Yash Toxic movie updates : ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ನಟ ಯಶ್ ಮುಂಬರುವ ಬಹುನಿರೀಕ್ಷಿತ ಚಿತ್ರ ʼಟಾಕ್ಸಿಕ್ʼ ಟೈಟಲ್‌ನಿಂದಲೇ ಸದ್ದು ಮಾಡುತ್ತಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಕರೀನಾ ಕಪೂರ್ ನಟಿಸಬೇಕಿತ್ತು, ಆದರೆ ಕಾರಣಾಂತರದಿಂದ ನಟಿ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ಹೌದು.. ಕೆಜಿಎಫ್ ನಂತರ ಯಶ್ ಟಾಕ್ಸಿಕ್ ಸಿನಿಮಾದ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಇದರಿಂದ ಈ ಸಿನಿಮಾದ ಮೇಲೆ ಬಹಳ ನಿರೀಕ್ಷೆ ಇದೆ. ‘ಟಾಕ್ಸಿಕ್’ನಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಕರೀನಾ, ಯಶ್ ಸಹೋದರಿಯ ಪಾತ್ರವನ್ನು ನಿರ್ವಹಿಸಬೇಕಿತ್ತು. ಮೂಲಗಳ ಪ್ರಕಾರ, ಕರೀನಾ ಕಪೂರ್ ಅವರ ಕಾಲ್ ಶೀಟ್ ಯಶ್ ಅವರ ಕಾಲ್ ಶೀಟ್ ಡೇಟ್‌ಗೆ ಹೊಂದಿಕೆಯಾಗುತ್ತಿಲ್ಲವಂತೆ. ನಿರ್ಮಾಪಕರು ಹಲವು ಬಾರಿ ರೀ ಶೆಡ್ಯೂಲ್ ಮಾಡಿದರೂ ಡೇಟ್ಸ್ ಸಿಗುತ್ತಿಲ್ಲವಂತೆ ಹೀಗಾಗಿ ನಟಿ ಕರೀನಾ ಖಾನ್ ಈ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ಇನ್ನು ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಸಹೋದರಿಯ ಪಾತ್ರಕ್ಕೆ ಬಹಳ ಮಹತ್ಯವಿದ್ದು, ಈ ಪಾತ್ರವನ್ನು ಪ್ಯಾನ್ ಇಂಡಿಯಾ ನಟಿ ಮಾಡಿದರೆ ಒಳ್ಳೆಯದು ಅಂತ ನಿರ್ಮಾಪಕರು ನಿರ್ಧರಿಸಿದ್ದರು. ಆದ್ರೆ ಇದೀಗ ಕರೀನಾ ಲಭ್ಯವಿಲ್ಲದ ಕಾರಣ ಬೇರೆ ನಟಿಯ ಮೊರೆ ಹೋಗಬೇಕಾಗಿದೆ. ಕಿಯಾರಾ ಅಡ್ವಾಣಿ ಈ ಚಿತ್ರದ ಭಾಗವಾಗಲಿದ್ದು, ಕರೀನಾ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ವದಂತಿಗಳೂ ಇವೆ.
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment