Loading Now

ಮೇ ತಿಂಗಳ ನಂತರ ನಟನೆಗೆ ಗುಡ್ ಬೈ ಹೇಳಲಿದ್ದಾರೆ ದೀಪಿಕಾ..! ನಟಿ ನಿರ್ಧಾರ ಕೇಳಿ ಪ್ಯಾನ್ಸ್ ಖುಷಿ

ಮೇ ತಿಂಗಳ ನಂತರ ನಟನೆಗೆ ಗುಡ್ ಬೈ ಹೇಳಲಿದ್ದಾರೆ ದೀಪಿಕಾ..! ನಟಿ ನಿರ್ಧಾರ ಕೇಳಿ ಪ್ಯಾನ್ಸ್ ಖುಷಿ

Deepika Padukone pregnancy: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅತೀ ಶೀಘ್ರದಲ್ಲೆ ತಾಯಿಯಾಗಲಿದ್ದಾರೆ. ಸ್ವತಃ ನಟಿ ಈ ಕುರಿತ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು.. ಇದೀಗ ದೀಪಿಕಾ ಮಹತ್ವದ ನಿರ್ಧಾರವೊಂದನ್ನ ತೆಗೆದುಕೊಂಡಿದ್ದಾರೆ..

ಹೌದು.. ದೀಪಿಕಾ ಎರಡು ತಿಂಗಳ ಗರ್ಭಿಣಿ. ಹೀಗಾಗಿ ಅವರು ತಮ್ಮ ಬಾಕಿ ಉಳಿದಿರುವ ಸಿನಿಮಾಗಳ ಕೆಲಸವನ್ನು ಪೂರ್ಣಗೊಳಿಸುವಲ್ಲಿ ನಿರತರಾಗಿದ್ದಾರೆ. ತೆಲುಗು ಸಿನಿಮಾ ಡಾಟ್ ಕಾಮ್ ವರದಿ ಪ್ರಕಾರ ದೀಪಿಕಾ ಪಡುಕೋಣೆ ಆದಷ್ಟು ಬೇಗ ಎಲ್ಲಾ ಪ್ರಾಜೆಕ್ಟ್ ಗಳಿಂದ ಮುಕ್ತವಾಗಲು ಹಗಲಿರುಳು ಶ್ರಮಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ತಮ್ಮ ಮುಂಬರುವ ಸಿನಿಮಾ ಕಲ್ಕಿ 2898 AD (Kalki 2898 AD) ಪ್ರಚಾರದಲ್ಲಿಯೂ ಭಾಗಿಯಾಗಲಿದ್ದಾರೆ.ಅಷ್ಟೇ ಅಲ್ಲ ದೀಪಿಕಾ ವಿರಾಮ ತೆಗೆದುಕೊಳ್ಳುವುದಕ್ಕಿಂತ ಮುಂಚೆ ಅಂದರೆ ಮೇ ಅಂತ್ಯದೊಳಗೆ ಈ ಸಿನಿಮಾಗೆ ಸಂಬಂಧಪಟ್ಟ ಪ್ರಚಾರ ಕಾರ್ಯ, ಸಂದರ್ಶನವನ್ನು ಮುಗಿಸಲು ತಯಾರಿ ನಡೆಸಿದೆ. ಜೂನ್ ನಂತರ ದೀಪಿಕಾ ಆರೋಗ್ಯದ ದೃಷ್ಟಿಯಿಂದ ನಟನೆಗೆ ವಿರಾಮ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಸೆಪ್ಟೆಂಬರ್‌ನಲ್ಲಿ ಹೆರಿಗೆ ಆಗುವುದರಿಂದ ಈ ಎಲ್ಲಾ ಕೆಲಸಗಳಿಗೆ ನಟಿ ಕೆಲ ಕಾಲ ಗುಡ್ ಬೈ ಹೇಳಲಿದ್ದಾರೆ.ಕಲ್ಕಿ 2898 AD ಜೂನ್ 27, 2024 ರಂದು ಬಿಡುಗಡೆಯಾಗಲಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಭಾಸ್ ಅವರೊಂದಿಗೆ ದೀಪಿಕಾ ಸ್ಕ್ರೀನ್‌ ಶೇರ್‌ ಮಾಡಿದ್ದಾರೆ. ಈ ಚಿತ್ರದಲ್ಲಿ ದಿಶಾ ಪಟಾನಿ, ಬಾಲಿವುಡ್‌ ಹಿರಿಯ ನಟರಾದ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಸೇರಿದಂತೆ ದೊಡ್ಡ ತಾರಾಗಣವಿದೆ.

Share this content:

Post Comment

You May Have Missed