Loading Now

ಈ ಒಂದು ಕಾರಣಕ್ಕೆ ನಾನು ರಾಹುಲ್ ಗಾಂಧಿಯವರ ದೊಡ್ಡ ಅಭಿಮಾನಿ:  ಶಿವಣ್ಣ

ಈ ಒಂದು ಕಾರಣಕ್ಕೆ ನಾನು ರಾಹುಲ್ ಗಾಂಧಿಯವರ ದೊಡ್ಡ ಅಭಿಮಾನಿ:  ಶಿವಣ್ಣ

Shivarajkumar on Rahul Gandhi : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಇದೇ ವೇಳೆ ಎಲ್ಲಾ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಇತ್ತೀಚಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅಬ್ಬರದ ಪ್ರಚಾರ ಮಾಡಿದರು. ಈ ವೇಳೆ ಮಾತನಾಡಿದ ಶಿವಣ್ಣ ತಾವು ರಾಹುಲ್ ಗಾಂಧಿಯವರ ಪಕ್ಕಾ ಅಭಿಮಾನಿ ಅಂತ ಹೇಳಿಕೊಂಡರು.

ಹೌದು… ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್​​​​ ಸಮಾವೇಶದಲ್ಲಿ ನಟ ಶಿವ ರಾಜ್​​​ಕುಮಾರ್​​​ ಅವರು ರಾಹುಲ್​​​ ಗಾಂಧಿ ಅವರನ್ನು ಹಾಡಿ ಹೋಗಳಿದ್ದಾರೆ. ನಾನು ರಾಹುಲ್​​ ಗಾಂಧಿ ಅವರ ದೊಡ್ಡ ಅಭಿಮಾನಿ ಅಂತ ಹೇಳಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ ಕಾರಣ ಏನು ಎಂಬುವುದನ್ನೂ ಸಹ ತಿಳಿಸಿದ್ದಾರೆ.

ಸಮಾವೇಶದಲ್ಲಿ ಮಾತನಾಡಿದ ನಟ ಶಿವರಾಜ್​​​ ಕುಮಾರ್​​​, ಈ ದಿನ ನನಗೆ ತುಂಬಾ ಸಂತೋಷವಾಗುತ್ತಿದೆ. ಇಂತಹ ಮಹಾನಾಯಕರ ಜತೆಗೆ ವೇದಿಕೆಯನ್ನು ಹಂಚಿಕೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ. ನಾನು ರಾಹುಲ್​​ ಗಾಂಧಿ ಅವರ ದೊಡ್ಡ ಅಭಿಮಾನಿ, ಅವರ ಫಿಟ್ನೆಸ್​​​​ಗೆ, ಅವರ ಮನುಷ್ಯತ್ವಕ್ಕೆ ನಾನು ಫ್ಯಾನ್ ಎಂದು. ಯಾವ ಮನುಷ್ಯ ಫಿಟ್​​​ ಆಗಿರುತ್ತಾನೋ ಅವನು ದೇಶದಲ್ಲಿ ಸ್ಟ್ರೀಟ್​​​ ಆಗಿರುತ್ತಾನೆ ಎಂದು ಶಿವಣ್ಣ .

ಸಿನಿಮಾ ಸುದ್ದಿಗಳು, ಲೆಟೆಸ್ಟ್‌ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ

Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza

Share this content:

Post Comment

You May Have Missed