ನಾನು ಗೆದ್ದೆತ್ತಿನ ಬಾಲ ಹಿಡಿಯಲ್ಲ..! ಚುನಾವಣೆ ಹೊತ್ತಲ್ಲಿ ಡಿಬಾಸ್ ಈ ಮಾತನ್ನು ಹೇಳಿದ್ದು ಏಕೆ ಗೊತ್ತಾ..?
Darshan on Kaatera 2 : ಕಾಟೇರ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಯಿತು. ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾ ರೈತಾಪಿ ವರ್ಗದ ಕಥೆ ಆಧರಿತವಾಗಿತ್ತು. ಅಲ್ಲದೆ, ಎಲ್ಲಾ ವರ್ಗದ ಪ್ರೇಕ್ಷಕರಿಗೆ ಈ ಸಿನಿಮಾ ತುಂಬಾ ಇಷ್ಟವಾಯಿತು. ದಚ್ಚು ನಟನೆ ಮತ್ತು ಕಥೆ ಈ ಸಿನಿಮಾದ ಹೈಲೇಟ್ ಆಗಿತ್ತು.
ಇನ್ನು ಇತ್ತೀಚಿಗೆ ಕಾಟೇರ ಸಿನಿಮಾ ಶತದಿನೋತ್ಸವ ಕೂಡ ಆಚರಿಸಿಕೊಂಡಿತು. ಅಲ್ಲದೆ, ಕಾಟೇರ 2 (Kaatera 2) ಸಿನಿಮಾ ತೆರೆಗೆ ಬರತ್ತಾ ಎನ್ನುವ ಕುತೂಹಲ ಡಿಬಾಸ್ ಅಭಿಮಾನಿಗಳಲ್ಲಿ ಮೂಡಿತ್ತು. ಸಧ್ಯ ಈ ಕುರಿತು ದರ್ಶನ್ ಸ್ಪಷ್ಟನೆ ನೀಡಿದ್ದು, ನಾನು ಗೆದ್ದ ಎತ್ತಿನ ಬಾಲ ಹಿಡಿಯೋದಿಲ್ಲ. ಹಾಗಾಗಿ ಕಾಟೇರ 2 ಮಾಡಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ.
1970ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ನಿರ್ದೇಶಕ ತರುಣ್ ಸುಧೀರ್ ಚೆಂದವಾಗಿ ತೆರೆಮೇಲೆ ತಂದಿದ್ದರು. ಮಾಲಾಶ್ರೀ ಪುತ್ರಿ ಆರಾಧನಾ ಈ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಜಡೇಶ್ ಕುಮಾರ್ ಹಂಪಿ ಕಾಟೇರ್ ಸಿನಿಮಾಗೆ ಕಥೆ ಬರೆದಿದ್ದರು. ಚಿತ್ರ ಶತದಿನೋತ್ಸವ ಕಂಡ ಬೆನ್ನಲ್ಲೇ ಬರಹಗಾರರಿಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕಾರುಗಳನ್ನು ಗಿಫ್ಟ್ ನೀಡಿ ಗೌರವಿಸಿದರು.
ಸಧ್ಯ ಕಾಟೇರ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಂಡಿತ್ತು. ಕುಟುಂಬ ಸಮೇತ ಟಿವಿ ಮುಂದೆ ಕುಳಿತು ಜನ ಸಿನಿಮಾವನ್ನು ಕಣ್ತುಂಬಿಕೊಂಡಿದ್ದರು. ಸಧ್ಯ ಒಟಿಟಿಯಲ್ಲೂ ಸ್ಟ್ರೀಮಿಂಗ್ ಆಗುತ್ತಿದೆ. ಸಧ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ದರ್ಶನ್ ಅವರು ಕೈ ನೋವಿನಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ.
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment