PSPK ಹರಿ ಹರ ವೀರಮಲ್ಲು ಟೀಸರ್ ರಿಲೀಸ್..! ಜನಸೇನಾನಿ ಪಾತ್ರದಲ್ಲಿ ಅಬ್ಬರಿಸಿದ ಪವನ್ ಕಲ್ಯಾಣ್
Hari Hara Veera Mallu Teaser : ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹು ನಿರೀಕ್ಷಿತ ಹರಿ ಹರ ವೀರಮಲ್ಲು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಅದ್ಭುತವಾಗಿ ಮೂಡಿ ಬಂದಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.
ಇಂದು ( ಮೇ 2 )ಬೆಳಿಗ್ಗೆ 9 ಗಂಟೆಗೆ ಬಿಡುಗಡೆಯಾಗದ ಹರಿಹರ ವೀರ ಮಲ್ಲು ಟೀಸರ್ ನೋಡಿ ಅಭಿಮಾನಿಗಳು ಥ್ಲೀಲ್ ಆಗಿದ್ದಾರೆ. ಪವರ್ ಸ್ಟಾರ್ ಲುಕ್, ಆಕ್ಷನ್ ಸೀಕ್ವೆನ್ಸ್ ಟೀಸರ್ ಕಳೆ ಹೆಚ್ಚಿಸಿವೆ. 17 ನೇ ಶತಮಾನದ ಲುಕ್ ನಲ್ಲಿ ಜನಸೇನಾನಿಯಾಗಿ ಪವನ್ ಕಲ್ಯಾಣ್ ಕಾಣಿಸಿಕೊಂಡಿದ್ದಾರೆ.
ಹರಿ ಹರ ವೀರ ಮಲ್ಲು 17 ನೇ ಶತಮಾನದ ಆಕ್ಷನ್ ಡ್ರಾಮಾ ಸಿನಿಮಾ. ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಈ ಸಿನಿಮಾವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರದ ನಿರ್ದೇಶಕ ಕ್ರಿಶ್ ಜಗರ್ಲಮುಡಿ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಉದ್ಯಮದ ಬಾಬಿ ಡಿಯೋಲ್ ಮತ್ತು ನೋರಾ ಫತೇಹಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಔರಂಗಜೇಬ್ ಪಾತ್ರದಲ್ಲಿ ಬಾಬಿ ಡಿಯೋಲ್ ಮಿಂಚಿದ್ದಾರೆ..
Share this content:
Post Comment